ADVERTISEMENT

ಆನ್‌ಲೈನ್‌ನಲ್ಲಿ ಹಾಸನಾಂಬೆ ದರ್ಶನ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2020, 17:53 IST
Last Updated 4 ನವೆಂಬರ್ 2020, 17:53 IST
ಹಾಸನದಲ್ಲಿರುವ ಹಾಸನಾಂಬೆ ಸನ್ನಿಧಿ
ಹಾಸನದಲ್ಲಿರುವ ಹಾಸನಾಂಬೆ ಸನ್ನಿಧಿ   

ಹಾಸನ: ಅಧಿದೇವತೆ ಹಾಸನಾಂಬೆ ದರ್ಶನೋತ್ಸವ ನ.5ರಿಂದ 16ರವರೆಗೆ ನಡೆಯಲಿದ್ದು, ಸಂಪ್ರದಾಯದಂತೆ ಗುರುವಾರ ಮಧ್ಯಾಹ್ನ 12 ಗಂಟೆಗೆ ದೇವಸ್ಥಾನದ ಗರ್ಭಗುಡಿ ಬಾಗಿಲು ತೆರೆಯಲಿದೆ.

ಈ ಬಾರಿ ಕೋವಿಡ್‌ ಭೀತಿಯಿಂದ ಭಕ್ತರ ದರ್ಶನಕ್ಕೆ ನಿರ್ಬಂಧ ವಿಧಿಸಿದ್ದು, ಆನ್‌ಲೈನ್‌ ಮೂಲಕ ದರ್ಶನ ಪಡೆಯಲು ವ್ಯವಸ್ಥೆ ಮಾಡಲಾಗಿದೆ.

ನಗರದ ಹತ್ತು ಕಡೆ ಎಲ್‌ಇಡಿ ಪರದೆ ಅಳವಡಿಸಿದ್ದು, ಅಲ್ಲಿಂದಲೇ ಭಕ್ತರು ದೇವಿ ದರ್ಶನ ಪಡೆಯಬಹುದು. ಇದರ ಜತೆಗೆ http://hasanambalive2020.com ಮೂಲಕವೂ 12 ದಿನ ದೇವಿಯ ಪೂಜಾ ಕಾರ್ಯಕ್ರಮಗಳನ್ನು ವೀಕ್ಷಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ADVERTISEMENT

ಮೊದಲ ದಿನ ಹಾಗೂ ಬಾಗಿಲು ಮುಚ್ಚುವ ದಿನ ಜನಪ್ರತಿನಿಧಿಗಳು, ವಿಶೇಷ ಆಹ್ವಾನಿತರಿಗೆ ಮಾತ್ರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.