
ಮಂಗಳೂರು: ಆನ್‌ಲೈನ್ ಗೇಮ್‌ನಲ್ಲಿ ಸೋಲಿಸಿದ್ದಕ್ಕೆ ವ್ಯಕ್ತಿಯೊಬ್ಬರಿಗೆ ಚೂರಿಯಿಂದ ಇರಿದು ಕೊಲೆ ಯತ್ನ ನಡೆಸಿದ ಸಂಜಯ್ ಪೂಜಾರಿಗೆ ಇಲ್ಲಿನ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು 4 ವರ್ಷ ಜೈಲು ಶಿಕ್ಷೆ ಹಾಗೂ ₹20,500 ದಂಡ ವಿಧಿಸಿ ಶನಿವಾರ ಆದೇಶ ಮಾಡಿದೆ.
‘ಜಪ್ಪು ಬಪ್ಪಾಲ್‌ನ ಪ್ರತ್ಯುಶ್ ಸಾಲಿಯಾನ್ ಅವರು ಸಂಜಯ್ ಪೂಜಾರಿಯನ್ನು ‘ಫ್ರೀ–ಫೈರ್’ ಮೊಬೈಲ್ ಆನ್‌ಲೈನ್ ಗೇಮ್‌ನಲ್ಲಿ ಸೋಲಿಸಿದ್ದರು. ಈ ವಿಚಾರವಾಗಿ ಪ್ರತ್ಯುಶ್ ಮೇಲೆ ಸಂಜಯ್ ಪೂಜಾರಿ ದ್ವೇಷ ಹೊಂದಿದ್ದ. 2023ರ ಮೇ 17ರಂದು ಪ್ರತ್ಯುಶ್ ಅವರು ಜಪ್ಪು ಬಪ್ಪಾಲ್‌ನ ಮನೆಯಿಂದ ನಡೆದುಕೊಂಡು ನಂದಿಗುಡ್ಡೆ ಕಡೆಗೆ ಹೋಗುತ್ತಿದ್ದಾಗ, ಅವರನ್ನು ಸಂಜಯ್ ಪೂಜಾರಿ ತಡೆದು ನಿಲ್ಲಿಸಿ, ಅವಾಚ್ಯವಾಗಿ ಬೈದು, ಜೀವ ಬೆದರಿಕೆ ಒಡ್ಡಿದ್ದ. ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿದ್ದ. ಈ ಬಗ್ಗೆ ನಗರದ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.