ರಾಮನಗರ: ಕೆಂಗೇರಿಯ ರಾಜರಾಜೇಶ್ವರಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಸೋಮವಾರ ಸಂಜೆ 5ರ ವೇಳೆಗೆ ಆಕ್ಸಿಜನ್ ಖಾಲಿ ಆಗಲಿದ್ದು, 200ಕ್ಕೂ ಹೆಚ್ಚು ರೋಗಿಗಳ ಜೀವ ಅಪಾಯದಲ್ಲಿದೆ. ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ. ಸುರೇಶ್ ಒತ್ತಾಯಿಸಿದ್ದಾರೆ.
ಈ ಕುರಿತು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ವಿಡಿಯೊ ಸಂದೇಶ ನೀಡಿರುವ ಸುರೇಶ್, ‘ಆಕ್ಸಿಜನ್ ಸಿಗದೇ 200 ಜನರು ಸಾವು–ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾರೆ. ಆಸ್ಪತ್ರೆ ಆಡಳಿತ ಮಂಡಳಿಯು ಜಿಲ್ಲಾಧಿಕಾರಿಗಳಿಗೂ ಈ ವಿಷಯ ತಿಳಿಸಿದೆ. ನಾನು ಸಹ ಜಿಲ್ಲಾಧಿಕಾರಿ, ಆರೋಗ್ಯ ಕಾರ್ಯದರ್ಶಿಯೊಂದಿಗೆ ಈ ಬಗ್ಗೆ ಮಾತನಾಡಿದ್ದೇನೆ. ತಕ್ಷಣ ಕ್ರಮ ಕೈಗೊಂಡು ಚಾಮರಾಜನಗರದ ರೀತಿ ಮತ್ತೊಂದು ಘಟನೆ ಮರುಕಳಿಸದಂತೆ ನೋಡಿಕೊಳ್ಳಿ’ ಎಂದು ಅವರು ಎಚ್ಚರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.