ADVERTISEMENT

Pahalgam Attack | ಮಂಜುನಾಥ ನಿವಾಸಕ್ಕೆ ಅಸ್ಸಾಂ ಸಚಿವ ಭೇಟಿ, ₹5 ಲಕ್ಷ ಪರಿಹಾರ

​ಪ್ರಜಾವಾಣಿ ವಾರ್ತೆ
Published 25 ಮೇ 2025, 8:10 IST
Last Updated 25 ಮೇ 2025, 8:10 IST
<div class="paragraphs"><p>ಶಿವಮೊಗ್ಗದಲ್ಲಿ ಭಾನುವಾರ ಮಂಜುನಾಥರಾವ್ ಕುಟುಂಬ ಸದಸ್ಯರನ್ನು ಭೇಟಿ ಮಾಡಿ ಸಾಂತ್ವನ ಹೇಳಿದೆ ಅಸ್ಸಾಂ ಸಚಿವ</p></div>

ಶಿವಮೊಗ್ಗದಲ್ಲಿ ಭಾನುವಾರ ಮಂಜುನಾಥರಾವ್ ಕುಟುಂಬ ಸದಸ್ಯರನ್ನು ಭೇಟಿ ಮಾಡಿ ಸಾಂತ್ವನ ಹೇಳಿದೆ ಅಸ್ಸಾಂ ಸಚಿವ

   

ಶಿವಮೊಗ್ಗ: ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕರ ದಾಳಿಯಲ್ಲಿ ಮೃತರಾದ ಮಂಜುನಾಥ ರಾವ್ ನಿವಾಸಕ್ಕೆ ಅಸ್ಸಾಂನ ಕೈಗಾರಿಕಾ ಸಚಿವ ಬಿಮಲ್ ಬೋರಾ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ನಗರದ ವಿಜಯ ನಗರದಲ್ಲಿರುವ ರಾವ್ ನಿವಾಸಕ್ಕೆ ಭಾನುವಾರ ಭೇಟಿ ನೀಡಿದ ಸಚಿವರು, ಕುಟುಂಬಸ್ಥರಿಗೆ ₹ 5 ಲಕ್ಷ ಮೊತ್ತದ ಚೆಕ್ ಪರಿಹಾರವಾಗಿ ವಿತರಿಸಿದರು.

ADVERTISEMENT

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವರು, ಅಸ್ಸಾಂ ಸರ್ಕಾರ ನೊಂದವರ ಜೊತೆಯಿದೆ. ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಆದೇಶದ ಮೇರೆಗೆ ಪೆಹಲ್ಗಾಮ್ ನಲ್ಲಿ ಹತ್ಯೆಯಾದ 26 ಜನರ ಕುಟುಂಬಕ್ಕೆ ಪರಿಹಾರ ನೀಡಲು ತೀರ್ಮಾನಿಸಿದೆ. ನೊಂದ ಕುಟುಂಬಸ್ಥರ ದುಃಖದಲ್ಲಿ ಅಸ್ಸಾಂ ಸರ್ಕಾರ ಭಾಗಿಯಾಗಿದೆ. ಮೃತರ ಕುಟುಂಬಕ್ಕೆ ದೇವರು ದುಃಖ ಭರಿಸುವ ಶಕ್ತಿ ನೀಡಲಿ ಎಂದರು.

‘ಕಷ್ಟದ ಕಾಲದಲ್ಲಿ ನನಗೆ ಎಲ್ಲರೂ ಸಹಾಯ ಮಾಡುತ್ತಿದ್ದಾರೆ. ದುಖದಲ್ಲಿ ನೀವೆಲ್ಲರೂ ಬಂದು ಸಾಂತ್ವನ ಹೇಳುತ್ತಿರುವುದು ನಮಗೆ ಮನಸ್ಸು ಉಮ್ಮಳಿಸಿ ಬರುತ್ತಿದೆ’ ಎಂದು ಮೃತ ಮಂಜುನಾಥ ಪತ್ನಿ ಪಲ್ಲವಿ ಭಾವುಕರಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.