ADVERTISEMENT

ಪಂಚಮಸಾಲಿ ಸಮಾವೇಶ: ವಾಹನ ನಿಲುಗಡೆಗೆ ನಿರ್ಬಂಧ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2021, 20:19 IST
Last Updated 20 ಫೆಬ್ರುವರಿ 2021, 20:19 IST

ಬೆಂಗಳೂರು: ಪಂಚಮಸಾಲಿ ಸಮಾವೇಶದ ವೇಳೆ ಸಂಚಾರ ದಟ್ಟಣೆ ಉಂಟಾಗದಂತೆ ಕ್ರಮ ಕೈಗೊಂಡಿರುವ ಪೊಲೀಸರು, ವಾಹನಗಳ ಸಂಚಾರ ಮಾರ್ಗದಲ್ಲಿ ಬದಲಾವಣೆ ಮಾಡಿದ್ದಾರೆ. ಜೊತೆಗೆ, ಹಲವೆಡೆ ವಾಹನ ನಿಲುಗಡೆಗೂ ನಿರ್ಬಂಧ ವಿಧಿಸಿದ್ದಾರೆ.

‘ಕಾರ್ಯಕ್ರಮಕ್ಕೆ ಸ್ವಾಮೀಜಿಗಳು, ಗಣ್ಯರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬರುವ ನಿರೀಕ್ಷೆ ಇದೆ. ಅರಮನೆ ಮೈದಾನದ ಸುತ್ತಮುತ್ತಲಿನ ರಸ್ತೆಗಳಲ್ಲಿ ವಾಹನಗಳ ದಟ್ಟಣೆ ಉಂಟಾಗುವ ಸಾಧ್ಯತೆ ಇದೆ. ಸ್ಥಳೀಯರಿಗೆ ತೊಂದರೆಯಾಗಬಾರದೆಂಬ ಕಾರಣಕ್ಕೆ ಪರ್ಯಾಯ ಮಾರ್ಗಗಳ ವ್ಯವಸ್ಥೆ ಮಾಡಲಾಗಿದೆ’ ಎಂದು ಸಂಚಾರ ವಿಭಾಗದ ಜಂಟಿ ಕಮಿಷನರ್ ಡಾ. ಬಿ.ಆರ್. ರವಿಕಾಂತೇಗೌಡ ತಿಳಿಸಿದ್ದಾರೆ.

‘ಬೆಳಿಗ್ಗೆ 4 ಗಂಟೆಯಿಂದ ಕಾರ್ಯಕ್ರಮ ಮುಗಿಯುವವರೆಗೂ ರಮಣ ಮಹರ್ಷಿ ರಸ್ತೆ, ಸರ್ ಸಿ.ವಿ. ರಾಮನ್ ರಸ್ತೆ, ಮೇಖ್ರಿ ವೃತ್ತ, ಜಯಮಹಲ್ ರಸ್ತೆ, ತರಳಬಾಳು ರಸ್ತೆ, ಎಂ.ವಿ. ಜಯರಾಮನ್ ರಸ್ತೆ, ಪ್ಯಾಲೇಸ್ ರಸ್ತೆ, ಟಿ. ಚೌಡಯ್ಯ ರಸ್ತೆ ಹಾಗೂ ಸುತ್ತಮುತ್ತಲ ರಸ್ತೆಗಳಲ್ಲಿ ವಾಹನ ನಿಲುಗಡೆ ನಿಷೇಧಿಸಲಾಗಿದೆ’ ಎಂದೂ ಹೇಳಿದ್ದಾರೆ.

ADVERTISEMENT

‘ಕಾರ್ಯಕ್ರಮಕ್ಕೆ ಕಾರು ಹಾಗೂ ದ್ವಿಚಕ್ರ ವಾಹನಗಳಲ್ಲಿ ಬರುವವರು, ರಮಣ ಮಹರ್ಷಿ ರಸ್ತೆ ಮೂಲಕ ತ್ರಿಪುರವಾಸಿನಿ ಆವರಣ ಪ್ರವೇಶಿಸಿ ವಾಹನ ನಿಲುಗಡೆ ಮಾಡಬಹುದು’ ಎಂದೂ ತಿಳಿಸಿದ್ದಾರೆ.

ಕಾರ್ಯಕ್ರಮಕ್ಕೆ ಬರುವವರ ವಾಹನಗಳ ಸಂಚಾರಕ್ಕೆ ವ್ಯವಸ್ಥೆ
ಮೈಸೂರು ರಸ್ತೆ ಕಡೆಯಿಂದ ಬರುವವರು, ನಾಯಂಡನಹಳ್ಳಿ, ಸುಮನಹಳ್ಳಿ, ತುಮಕೂರು ರಸ್ತೆ, ಗೊರಗೊಂಟೆಪಾಳ್ಯ ಜಂಕ್ಷನ್, ಬಿಇಎಲ್. ಹೆಬ್ಬಾಳ ಮೇಲ್ಸೇತುವೆ, ಮೇಖ್ರಿ ವೃತ್ತ, ಜಯಮಹಲ್ ರಸ್ತೆ ಮೂಲಕ ಸರ್ಕಸ್ ಮೈದಾನ ಸೇರಬಹುದು.

ತುಮಕೂರು ರಸ್ತೆ ಕಡೆಯಿಂದ ಬರುವವರು ಗೊರಗೊಂಟೆಪಾಳ್ಯ ಜಂಕ್ಷನ್, ಬಿಇಎಲ್. ಹೆಬ್ಬಾಳ ಮೇಲ್ಸೇತುವೆ, ಮೇಖ್ರಿ ವೃತ್ತ, ಜಯಮಹಲ್ ರಸ್ತೆ ಮೂಲಕ ಸರ್ಕಸ್ ಮೈದಾನ ಸೇರಬಹುದು.

ಕನಕಪುರ ರಸ್ತೆ ಕಡೆಯಿಂದ ಬರುವವರು ಬನಶಂಕರಿ ಬಸ್‌ ನಿಲ್ದಾಣ, ಜಯನಗರ ನಾಲ್ಕನೇ ಹಂತದ ರಾಜಲಕ್ಷ್ಮಿ ಜಂಕ್ಷನ್, ಸೌಂತ್ ಎಂಡ್ ವೃತ್ತ, ಆರ್.ವಿ.ಜಂಕ್ಷನ್, ಮಿನರ್ವ ವೃತ್ತ, ಜೆ.ಸಿ.ರಸ್ತೆ, ಪುರಭವನ, ಕೆ.ಜಿ.ರಸ್ತೆ, ಮೈಸೂರು ಬ್ಯಾಂಕ್ ವೃತ್ತ, ಅರಮನೆ ರಸ್ತೆ, ಬಸವೇಶ್ವರ ವೃತ್ತ, ಮೌಂಟ್ ಕಾರ್ಮೆಲ್ ಕಾಲೇಜು, ವಸಂತನಗರ ಕೆಳ ಸೇತುವೆ ಮೂಲಕ ಸರ್ಕಸ್ ಮೈದಾನಕ್ಕೆ ಹೋಗಬಹುದು.

ಬನ್ನೇರುಘಟ್ಟ ರಸ್ತೆ ಕಡೆಯಿಂದ ಬರುವವರು, ಡೇರಿ ವೃತ್ತ, ಕೆ.ಎಚ್. ರಸ್ತೆ, ಮಿನರ್ವ್ ವೃತ್ತ, ಜೆ.ಸಿ.ರಸ್ತೆ, ಟೌನ್‌ಹಾಲ್, ಕೆ.ಜಿ.ರಸ್ತೆ, ಮೈಸೂರು ಬ್ಯಾಂಕ್ ವೃತ್ತ, ಪ್ಯಾಲೇಸ್ ರಸ್ತೆ, ಬಸವೇಶ್ವರ ವೃತ್ತ, ಮೌಂಟ್ ಕಾರ್ಮೆಲ್ ಕಾಲೇಜು, ವಸಂತನಗರ ಕೆಳ ಸೇತುವೆ ಮೂಲಕ ಸರ್ಕಸ್ ಮೈದಾನಕ್ಕೆ ಹೋಗಬಹುದು.

ಹೊಸೂರು ರಸ್ತೆ ಕಡೆಯಿಂದ ಬರುವವರು, ಮಡಿವಾಳ, ಡೈರಿ ವೃತ್ತ, ಕೆ.ಎಚ್. ರಸ್ತೆ, ಮಿನರ್ವ ವೃತ್ತ, ಜೆ.ಸಿ.ರಸ್ತೆ, ಪುರಭವನ, ಕೆ.ಜಿ.ರಸ್ತೆ, ಮೈಸೂರು ಬ್ಯಾಂಕ್ ವೃತ್ತ, ಪ್ಯಾಲೇಸ್ ರಸ್ತೆ, ಬಸವೇಶ್ವರ ವೃತ್ತ, ಮೌಂಟ್ ಕಾರ್ಮೆಲ್ ಕಾಲೇಜು, ವಸಂತನಗರ ಕೆಳ ಸೇತುವೆ ಮೂಲಕ ಸರ್ಕಸ್ ಮೈದಾನ ತಲುಪಬಹುದು.

ಹಳೆ ಮದ್ರಾಸ್ ರಸ್ತೆ ಕಡೆಯಿಂದ ಬರುವವರು, ಕೆ.ಆರ್.ಪುರ ತೂಗು ಸೇತುವೆ, ಹೆಣ್ಣೂರು ಜಂಕ್ಷನ್, ನಾಗವಾರ, ಹೆಬ್ಬಾಳ ಮೇಲ್ಸೇತುವೆ, ಮೇಖ್ರಿ ವೃತ್ತ ಮೂಲಕ ಮೈದಾನಕ್ಕೆ ಹೋಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.