ADVERTISEMENT

ಸಂಸತ್ ಭದ್ರತಾ ಲೋಪ: ಸಲೂನ್‌ ಸ್ನೇಹಿತನಿಂದ ಮನೋರಂಜನ್‌ಗೆ ಹಣ!

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2023, 23:30 IST
Last Updated 21 ಡಿಸೆಂಬರ್ 2023, 23:30 IST
<div class="paragraphs"><p>ಮನೋರಂಜನ್‌</p></div>

ಮನೋರಂಜನ್‌

   

ಮೈಸೂರು: ಸಂಸತ್ತಿನಲ್ಲಿ ಭದ್ರತಾ ಲೋಪ ಪ್ರಕರಣದ ಆರೋಪಿ ಡಿ.ಮನೋರಂಜನ್‌ಗೆ, ನಗರದ ವಿಜಯನಗರದಲ್ಲಿ ಹೇರ್‌ ಕಟಿಂಗ್ ಸಲೂನ್‌ ನಡೆಸುತ್ತಿರುವ ಸ್ನೇಹಿತ ಸೂರಪ್ಪ ಹಣ ವರ್ಗಾವಣೆ ಮಾಡಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.

ಹೀಗಾಗಿ ಸೂರಪ್ಪ ಅವರನ್ನು ದೆಹಲಿ ಪೊಲೀಸರು ಎರಡು ದಿನದಿಂದ ವಿಚಾರಣೆಗೊಳ ಪಡಿಸಿದ್ದಾರೆ. ಆರೋಪಿ ಮನೆಯಲ್ಲಿ ದೊರೆತ ಡೈರಿಯಲ್ಲಿರುವ ಮಾಹಿತಿಗಳ ಜಾಡು ಹಿಡಿದು ತನಿಖೆ ಮುಂದುವರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ನಿರುದ್ಯೋಗಿಯಾಗಿದ್ದ ಆರೋಪಿಯ ಹಣದ ಮೂಲಗಳ ಬಗ್ಗೆಯೇ ಅಧಿಕಾರಿಗಳು ಗಂಭೀರ ಗಮನ ಹರಿಸಿದ್ದಾರೆ. ಆತನ ಸಂಪರ್ಕಕ್ಕೆ ಬಂದಿರುವ ಎಲ್ಲರನ್ನೂ ವಿಚಾರಣೆಗೆ ಒಳಪಡಿಸುವ ಪ್ರಯತ್ನಗಳೂ ನಡೆದಿವೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.