ADVERTISEMENT

ಸುಡಾನ್‌ನಲ್ಲಿ ಹುಣಸೂರು ಜನ ಅತಂತ್ರ: ನೆರವಿಗೆ ಮೊರೆ

ಮಾಹಿತಿ ಪಡೆದ ಸಂಸದ ಪ್ರತಾಪಸಿಂಹ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2023, 7:16 IST
Last Updated 19 ಏಪ್ರಿಲ್ 2023, 7:16 IST
ಸುಡಾನ್ ಮನೆಯೊಳಗಿರುವ ಸ್ಥಳಿಯರು
ಸುಡಾನ್ ಮನೆಯೊಳಗಿರುವ ಸ್ಥಳಿಯರು   

ಹುಣಸೂರು(ಮೈಸೂರು): ಮೂರು ತಿಂಗಳ ಹಿಂದೆ ಆಯುರ್ವೇದ ಔಷಧ ಮತ್ತು ಮಸಾಜ್ ಮಾಡುವ ಪರಿಣಿತರ ತಂಡ ಸುಡಾನ್ ದೇಶದ ಆಲ್ ಬಶೇರ್ ನಗರಕ್ಕೆ ತೆರಳಿ ವ್ಯಾಪಾರ ನಡೆಸಿದ್ದರು. ಇತ್ತೀಚೆಗೆ ಸಂಘರ್ಷ ಆರಂಭವಾಗಿ ನಮ್ಮವರು ಅತಂತ್ರರಾಗಿದ್ದಾರೆ ಎಂದು ಪಕ್ಷಿರಾಜಪುರದ ಯಜಮಾನ ನಂಜುಂಡಸ್ವಾಮಿ ತಿಳಿಸಿದರು.

ಬ್ಲಾಕ್ ಒಂದರಲ್ಲಿ 30 ಮತ್ತು ಬ್ಲಾಕ್‌ ಎರಡರಲ್ಲಿ 10 ರಿಂದ 15 ಜನರು ತೆರಳಿದ್ದಾರೆ. ಇವರನ್ನು ಕಳೆದ 10 ದಿನದಿಂದ ಒಂದು ಮನೆಯಲ್ಲಿ ಕೂಡಿ ಹಾಕಿದ್ದು,ಇವರಿಗೆ ಅನ್ನ ನೀರು ಇಲ್ಲವಾಗಿದೆ ಎಂದು ಫೋನ್ ಮೂಲಕ ಹೇಳಿದ್ದಾರೆ.

ಸಂಸದರ ಸಂಪರ್ಕ, ಭರವಸೆ: ಮೈಸೂರು ಕೊಡಗು ಸಂಸದ ಪ್ರತಾಪಸಿಂಹ ಗುರುವಾರ ಬೆಳಗ್ಗೆ ಕರೆ ಮಾಡಿ ಸಂಪೂರ್ಣ ವಿವರಣೆ ಪಟ್ಟಿ ಕೇಳಿದ್ದು, ಎಲ್ಲರನ್ನೂ ಸುರಕ್ಷಿತವಾಗಿ ಸ್ವದೇಶಕ್ಕೆ ಕರೆದು ತರುವ ಭರವಸೆ ನೀಡಿದ್ದಾರೆ ಎಂದರು.

ADVERTISEMENT

ರಾಜ್ಯದ ಶಿವಮೊಗ್ಗ, ಹಾಸನ ಮತ್ತು ಮೈಸೂರು ಜಿಲ್ಲೆಯಿಂದ 600 ಜನರು ತೆರಳಿದ್ದಾರೆ ಎಂದು ಮಾಹಿತಿ ನೀಡಿದರು.

ಸುಡಾನ್ ಗೆ ತೆರಳಿದ ಪಕ್ಷಿರಾಜಪುರ ನಿವಾಸಿಗರು ಅರಬಿಕ್ ಭಾಷೆ ಮಾತನಾಡುವುದರಿಂದ ಸ್ಥಳಿಯರೊಂದಿಗೆ ಮಾತನಾಡಿ ಆಗುಹೋಗುಗಳ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.