ಬೆಂಗಳೂರು: ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿರುವ ‘ಇ–ಫಾರ್ಮಸಿ’ ವ್ಯವಸ್ಥೆ ವಿರೋಧಿಸಿ ಕರ್ನಾಟಕ ಔಷಧ ವ್ಯಾಪಾರಿಗಳ ಸಂಘ ಇದೇ 28 ರಂದು ಔಷಧ ಅಂಗಡಿಗಳ ಬಂದ್‌ಗೆ ಕರೆ ನೀಡಿದೆ.
ಆಲ್ ಇಂಡಿಯಾ ಆರ್ಗನೈಜೇಷನ್ ಆಫ್ ಕೆಮಿಸ್ಟ್ ಎಂಡ್ ಡ್ರಗಿಸ್ಟ್ಸ್ ಸಂಸ್ಥೆ ಈ ಬಂದ್‌ಗೆ ಕರೆ ಕೊಟ್ಟಿದೆ. ಕರ್ನಾಟಕದ ಸಂಘ ಕೂಡ ಇದಕ್ಕೆ ಬೆಂಬಲ ಸೂಚಿಸಿದೆ.
‘ಇ–ಫಾರ್ಮಸಿ (ಆನ್‌ಲೈನ್‌ನಲ್ಲಿ ಔಷಧ ಮಾರಾಟ ಮತ್ತು ವಿತರಣೆ) ವ್ಯವಸ್ಥೆಯನ್ನು ತರಾತುರಿಯಲ್ಲಿ ಜಾರಿಗೆ ತರುವ ಕೇಂದ್ರ ಸರ್ಕಾರದ ನೀತಿಯಿಂದ ಗ್ರಾಹಕರು ವಂಚನೆಗೆ ಒಳಗಾಗುತ್ತಾರೆ. ಈ ನೀತಿ ವಿರೋಧಿಸಿ ನಡೆಸಲಿರುವ ಬಂದ್ ದಿನ ರಾಜ್ಯದಲ್ಲಿರುವ 27 ಸಾವಿರ ಔಷಧ ಮಳಿಗೆಗಳು ತೆರೆಯುವುದಿಲ್ಲ’ ಎಂದು ಸಂಘದ ಉಪಾಧ್ಯಕ್ಷ ದೇವಿದಾಸ್ ಪಿ.ಪ್ರಭು ಹೇಳಿದರು.
ಸೆ. 27ರ ಮಧ್ಯರಾತ್ರಿಯಿಂದ ಸೆ. 28ರ ರಾತ್ರಿವರೆಗೂ ಬಂದ್ ಮಾಡಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.