ADVERTISEMENT

ಹುಬ್ಬಳ್ಳಿ: ಜನರ ಸಮಸ್ಯೆಗೆ ಜಿಲ್ಲಾಧಿಕಾರಿ ಪಟಪಟನೇ ಉತ್ತರ

ಪ್ರಜಾವಾಣಿ ಕಚೇರಿಯಲ್ಲಿ ನೇರ ಫೋನ್‌ ಇನ್‌ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2018, 7:07 IST
Last Updated 6 ಅಕ್ಟೋಬರ್ 2018, 7:07 IST
   

ಹುಬ್ಬಳ್ಳಿ: ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಲು ಹಾಗೂ ಉತ್ತರ ನೀಡಲು ‘ಪ್ರಜಾವಾಣಿ ಮತ್ತು ಡೆಕ್ಕನ್‌ ಹೆರಾಲ್ಡ್‌’ ಆಯೋಜಿಸಿರುವ ನೇರ ಫೋನ್‌ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ದೀಪಾ ಚೋಳನ್‌ ಭಾಗವಹಿಸಿದ್ದಾರೆ.

ಅವರು ಶನಿವಾರ ಬೆ. 11.50ರ ಸುಮಾರಿಗೆ ಪತ್ರಿಕಾ ಕಚೇರಿಗೆ ಬರುತ್ತಿದ್ದಂತೆ ಫೋನ್‌ಗಳ ಸುರಿಮಳೆ ಎದುರಾಯಿತು. ಕುಂದಗೋಳ, ಅಳ್ನಾವರ, ಅಣ್ಣಿಗೇರಿ, ಧಾರವಾಡ, ನವಲಗುಂದ, ಕಲಘಟಗಿ ಭಾಗದ ಜನರು ಫೋನ್‌ ಮಾಡಿ ತಮ್ಮ ಸಮಸ್ಯೆಗಳನ್ನು ತೋಡಿಕೊಂಡರು. ಶೀಘ್ರದಲ್ಲಿಯೇ ಸಮಸ್ಯೆಗಳಿಗೆ ಪರಿಹಾರ ದೊರಕಿಸಿಕೊಡಲಾಗುವುದು ಎಂದು ಜಿಲ್ಲಾಧಿಕಾರಿಗಳು ಭರವಸೆ ನೀಡಿದರು.

ತಹಶೀಲ್ದಾರ್‌, ಆರೋಗ್ಯ, ಸಮಾಜ ಕಲ್ಯಾಣ ಸೇರಿದಂತೆ ಎಲ್ಲ ಇಲಾಖೆಗಳು ಅಧಿಕಾರಿಗಳು ಇದ್ದಾರೆ. ಬೆಳೆ ವಿಮೆ, ಪೋಡಿ, ಹೆಸರು ಖರೀದಿ ಮಿತಿ ಹೆಚ್ಚಳ ಮತ್ತು ತೇವಾಂಶದ ಪ್ರಮಾಣದ ಬಗ್ಗೆ ರೈತರು ಪ್ರಶ್ನೆಗಳನ್ನು ಕೇಳಿ ಗೊಂದಲ ಪರಿಹರಿಸಿಕೊಂಡರು. ಇನ್ನೂ ಕೆಲವರು ಜಾತಿ ಪ್ರಮಾಣ ಪತ್ರ, ವಸತಿ, ನೀರು ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.