ADVERTISEMENT

ಸೋಂಕಿತನ ಸಾವು| ಪ್ಲಾಸ್ಮಾ ಚಿಕಿತ್ಸೆ ವೈಫಲ್ಯ ಅಲ್ಲ ಎಂದ ಸುರೇಶ್‌ ಕುಮಾರ್‌

​ಪ್ರಜಾವಾಣಿ ವಾರ್ತೆ
Published 15 ಮೇ 2020, 20:23 IST
Last Updated 15 ಮೇ 2020, 20:23 IST
ಸಚಿವ ಎಸ್‌ ಸುರೇಶ್‌ ಕುಮಾರ್‌
ಸಚಿವ ಎಸ್‌ ಸುರೇಶ್‌ ಕುಮಾರ್‌    

ಬೆಂಗಳೂರು: ‘ಪ್ಲಾಸ್ಮಾ ಚಿಕಿತ್ಸೆ ಪಡೆದಿದ್ದ ಆಂಧ್ರಪ್ರದೇಶದ ಕೊರೊನಾ ವೈರಸ್‌ ಸೋಂಕಿತ ವ್ಯಕ್ತಿ ಗುರುವಾರ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಇದು ಪ್ಲಾಸ್ಮಾ ಚಿಕಿತ್ಸೆ ವೈಫಲ್ಯ ಎಂದು ಭಾವಿಸಬೇಕಿಲ್ಲ’ ಎಂದು ಸುರೇಶ್‌ ಕುಮಾರ್‌ ಹೇಳಿದರು.

‘ಮಾಧ್ಯಮಗಳು ಥೆರಪಿ ಚಿಕಿತ್ಸೆ ವೈಫಲ್ಯ ಎಂದು ಬಿಂಬಿಸುತ್ತಿವೆ. ವೆಂಟಿಲೇಟರ್‌ನಲ್ಲಿದ್ದ ರೋಗಿಗೆ ಕೊನೆಯ ಅಸ್ತ್ರವಾಗಿ ಈ ಚಿಕಿತ್ಸೆ ನೀಡಲಾಗಿತ್ತು. ಅವರು ಚೇತರಿಸಿಕೊಂಡಿದ್ದರು. ಪ್ರಾಯೋಗಿಕವಾಗಿ ಪ್ಲಾಸ್ಮಾ ಚಿಕಿತ್ಸೆ ನಡೆಸಲು ಕೇಂದ್ರ ಸರ್ಕಾರ ಅವಕಾಶ ನೀಡಿದೆ. ಒಟ್ಟು ಪ್ರಕರಣಗಳ ಫಲಿತಾಂಶ ನೋಡಿ ಚಿಕಿತ್ಸೆಯನ್ನು ಅಳೆಯಬೇಕೇ ವಿನಾ ಒಂದು ಪ್ರಕರಣದಿಂದಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT