ADVERTISEMENT

ಚರ್ಚ್‌ನ ಸಾಮೂಹಿಕ ಪ್ರಾರ್ಥನೆಯಲ್ಲಿ ಪೊಲೀಸ್ ಕಮಿಷನರ್ ಭಾಗಿ?

ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆದ ವಿಡಿಯೊ ತುಣುಕು

​ಪ್ರಜಾವಾಣಿ ವಾರ್ತೆ
Published 11 ಮೇ 2020, 13:58 IST
Last Updated 11 ಮೇ 2020, 13:58 IST
ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಪ್ರಾರ್ಥನೆ ಮಾಡುತ್ತಿರುವ ವಿಡಿಯೊ ತುಣುಕಿನ ದೃಶ್ಯಾವಳಿ.
ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಪ್ರಾರ್ಥನೆ ಮಾಡುತ್ತಿರುವ ವಿಡಿಯೊ ತುಣುಕಿನ ದೃಶ್ಯಾವಳಿ.   

ಬೆಂಗಳೂರು: ಲಾಕ್‌ಡೌನ್ ನಡುವೆ ನಗರದ ಚರ್ಚ್ ಒಂದರಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ನಗರ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಭಾಗಿಯಾದ ಆರೋಪ ಕೇಳಿಬಂದಿದ್ದು, ಇದಕ್ಕೆ ಸಾಕ್ಷ್ಯ ಎಂಬಂತೆ ಭಾಸ್ಕರ್ ರಾವ್ ಪ್ರಾರ್ಥನೆ ಮಾಡುತ್ತಿರುವವಿಡಿಯೊ ತುಣುಕುಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ.

ಈ ಬಗ್ಗೆ ಹಲವು ಸಾಮಾಜಿಕ ಜಾಲ ತಾಣಗಳಲ್ಲಿ ಚರ್ಚೆ ಕೂಡಾ ನಡೆಯುತ್ತಿದೆ.

ತಾವೇ ನಗರದ ಎಲ್ಲ ಚರ್ಚ್, ಮಸೀದಿ, ದೇವಸ್ಥಾನಗಳ ಬಂದ್​ಗೆ ಆದೇಶ ನೀಡಿದ್ದಭಾಸ್ಕರ್ ರಾವ್, ಈಗ ತಾವೇ ಚರ್ಚ್ ಪ್ರಾರ್ಥನೆಯಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ಜೊತೆಗೆ ಹತ್ತಕ್ಕೂ ಹೆಚ್ಚು ಮಂದಿ ಪೊಲೀಸರೂ ಪ್ರಾರ್ಥನೆ ಮಾಡುವ ದೃಶ್ಯ ವಿಡಿಯೊದಲ್ಲಿದೆ.

ADVERTISEMENT

ಚರ್ಚ್ ಫಾದರ್ ಅವರ ಸಮೀಪದಲ್ಲಿ ನಿಂತುಕೊಂಡು ಭಾಸ್ಕರ್ ರಾವ್ ಪ್ರಾರ್ಥನೆಮಾಡುತ್ತಿದ್ದಾರೆ. ಅಂತರ ಕಾಪಾಡಿಕೊಳ್ಳಲಾಗಿದೆ. ಆದರೆ, ಪ್ರಾರ್ಥನೆಯಲ್ಲಿಭಾಗಿಯಾದ ಎಲ್ಲರೂ ಮಾಸ್ಕ್ಧರಿಸಿಲ್ಲ.

ಕೇವಲ ಕೆಲವು ಪೊಲೀಸರು ಮಾತ್ರ ಮಾಸ್ಕ್ ಧರಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಪ್ರಯತ್ನಿಸಿದರೂ ಭಾಸ್ಕರ್ ರಾವ್ ಲಭ್ಯರಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.