ADVERTISEMENT

ಫಾಝಿಲ್ ಹತ್ಯೆ ಹಿಂದೆ ರೌಡಿ ಸುಹಾಸ್ ಶೆಟ್ಟಿ ತಂಡ?

ಆರೋಪಿಗಳ ಸುಳಿವು ಸಿಕ್ಕಿದೆ: ಎಡಿಜಿಪಿ ಅಲೋಕ್ ಕುಮಾರ್

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2022, 21:15 IST
Last Updated 1 ಆಗಸ್ಟ್ 2022, 21:15 IST
ಮಹಮ್ಮದ್ ಫಾಝಿಲ್
ಮಹಮ್ಮದ್ ಫಾಝಿಲ್   

ಮಂಗಳೂರು: ಸುರತ್ಕಲ್‌ನಲ್ಲಿ ಗುರುವಾರ ರಾತ್ರಿ ನಡೆದ ಕಾಟಿಪಳ್ಳ ಮಂಗಳಪೇಟೆಯ ಮಹಮ್ಮದ್ ಫಾಝಿಲ್ ಹತ್ಯೆ ಹಿಂದೆ ರೌಡಿಶೀಟರ್ ಸುಹಾಸ್ ಶೆಟ್ಟಿ ತಂಡದ ಕೈವಾಡ ಇರುವ ಬಗ್ಗೆ ಖಚಿತ ಸುಳಿವು ದೊರಕಿದೆ. ಈ ತಂಡದ ಕೆಲವರನ್ನು ವಶಕ್ಕೆಪಡೆದು ವಿಚಾರಣೆ ನಡೆಸುತ್ತಿರುವುದಾಗಿ ಪೊಲೀಸ್‌ ಮೂಲಗಳು ತಿಳಿಸಿವೆ.

‘ಹಿಂದೆ ಬಜ್ಪೆ ಸೇರಿದಂತೆ ಎರಡು ಕಡೆ ನಡೆದ ಕೊಲೆ ಪ್ರಕರಣಗಳಲ್ಲಿ ಈ ತಂಡ ಭಾಗಿಯಾದ ಆರೋಪ ಇದೆ’ ಎಂದು ಈ ಮೂಲಗಳು ಹೇಳಿವೆ.

‘ಫಾಝಿಲ್‌ ಹತ್ಯೆಗೆ ಬಳಸಿದಕಾರನ್ನು ಬಾಡಿಗೆಗೆ ನೀಡಿದ್ದ ಅರೋಪಿ ಅಜಿತ್ ಕ್ರಾಸ್ತ ಎಂಬುವರನ್ನು ಭಾನುವಾರ ಬಂಧಿಸಲಾಗಿದೆ. ಬಂಧಿತ ಆರೋಪಿ ನೀಡಿದ ಸುಳಿವು ಆಧರಿಸಿ ಸುಹಾಸ್ ಶೆಟ್ಟಿ ತಂಡದ ಸದಸ್ಯ
ರನ್ನು ವಶಕ್ಕೆ ಪಡೆಯಲಾಗಿದೆ’ ಎಂದು ತಿಳಿಸಿವೆ.

ADVERTISEMENT

‘ಫಾಝಿಲ್ ಹತ್ಯೆ ಪ್ರಕರಣದ ಆರೋಪಿಗಳನ್ನುಸದ್ಯದಲ್ಲೆ ಬಂಧಿಸುತ್ತೇವೆ’ ಎಂದು ಕಾನೂನು
ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮಸೂದ್‌ ಹತ್ಯೆ ಹಿಂದೆ ಕೋಮು ಆಯಾಮ ಇಲ್ಲ’ ಎಂದು ಡಿಜಿಪಿ ಪ್ರವೀಣ್‌ ಸೂದ್‌ ಹೇಳಿದರು.

‘ಗಾಂಜಾ ಕಾರಣ’: ‘ಸುಳ್ಯದ ಮಸೂದ್‌ ಹತ್ಯೆ ಹಿಂದೆ ವೈಯಕ್ತಿಕ ಹಾಗೂ ಗಾಂಜಾ ಕಾರಣ ಇದೆ’ ಎಂದು
ಈ ಕ್ಷೇತ್ರದ ಶಾಸಕರೂ ಆಗಿರುವ ಸಚಿವ ಎಸ್‌.ಅಂಗಾರಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.