ADVERTISEMENT

ಪ್ರಜಾವಾಣಿ ವರದಿ ಫಲಶ್ರುತಿ| ಹರಿದ ಧ್ವಜವನ್ನು ಕೆಳಗಿಳಿಸಿದ ವಿಜಯನಗರ ಜಿಲ್ಲಾಡಳಿತ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2023, 9:22 IST
Last Updated 3 ಮಾರ್ಚ್ 2023, 9:22 IST
ಹರಿದ ಸ್ಥಿತಿಯಲ್ಲಿ ಹಾರುತಿದ್ದ ರಾಷ್ಟ್ರಧ್ವಜ. ವರದಿ ನಂತರ ಧ್ವಜವನ್ನು ಕೆಳಕೆ ಇಳಿಸಿರುವುದು
ಹರಿದ ಸ್ಥಿತಿಯಲ್ಲಿ ಹಾರುತಿದ್ದ ರಾಷ್ಟ್ರಧ್ವಜ. ವರದಿ ನಂತರ ಧ್ವಜವನ್ನು ಕೆಳಕೆ ಇಳಿಸಿರುವುದು    

ಹೊಸಪೇಟೆ (ವಿಜಯನಗರ): ಹರಿದ ಸ್ಥಿತಿಯಲ್ಲಿ ತ್ರಿವರ್ಣ ಧ್ವಜ ಹಾರಾಡುತ್ತಿರುವುದರ ಬಗ್ಗೆ ಪ್ರಜಾವಾಣಿ ವರದಿ ಪ್ರಕಟಿಸಿದ ಬೆನ್ನಲ್ಲೇ ಜಿಲ್ಲಾಡಳಿತವು ಧ್ವಜವನ್ನು ಕೆಳಗಿಳಿಸಿದೆ.

ನಗರದ ಡಾ. ಪುನೀತ್ ರಾಜಕುಮಾರ್ ಜಿಲ್ಲಾ ಕ್ರೀಡಾಂಗಣದಲ್ಲಿರುವ 405 ಅಡಿ ಎತ್ತರದ ಧ್ವಜ ಸ್ತಂಭದಲ್ಲಿ ತ್ರಿವರ್ಣ ಧ್ವಜ ಹರಿದ ಸ್ಥಿತಿಯಲ್ಲಿ ಹಾರಾಡುತ್ತಿತ್ತು.

ಗುರುವಾರದಿಂದ ಧ್ವಜ ಹರಿದ ಸ್ಥಿತಿಯಲ್ಲೇ ಹಾರಾಡುತ್ತಿತ್ತು. ಆದರೆ, ಅಧಿಕಾರಿಗಳು ಅದನ್ನು ಕೆಳಗಿಳಿಸಿರಲಿಲ್ಲ.

ADVERTISEMENT

‘ರಾಷ್ಟ್ರಧ್ವಜಕ್ಕೆ ಅಪಮಾನ ಮಾಡುತ್ತಿರುವುದು ಸರಿಯಲ್ಲ. ಕೂಡಲೇ ಕೆಳಗಿಳಿಸಿ ಬೇರೆ ಧ್ವಜ ಹಾರಿಸಬೇಕು’ ಎಂದು ವಿಜಯನಗರ ಜಿಲ್ಲಾ ಬಾಬಾ ಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಸಂಘಧ ಅಧ್ಯಕ್ಷ ಸೋಮಶೇಖರ್ ಬಣ್ಣದಮನೆ ಆಗ್ರಹಿಸಿದ್ದರು.

ಸಾರ್ವಜನಿಕರ ತೆರಿಗೆ ಹಣದಲ್ಲಿ ಎತ್ತರದ ಧ್ವಜಸ್ತಂಭ ನಿರ್ಮಿಸಿ ಅದನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡದಿದ್ದರೆ ಹೇಗೆ ಎಂದು ಅವರು ಪ್ರಶ್ನಿಸಿದ್ದರು.

'ಪರಿಶೀಲಿಸಿ ಸರಿಪಡಿಸುವ ಕೆಲಸ ಮಾಡಲಾಗುವುದು' ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ 'ಪ್ರಜಾವಾಣಿ'ಗೆ ತಿಳಿಸಿದ್ದರು. ಅದರಂತೆ ಇಂದು ಧ್ವಜವನ್ನು ಕಳಗಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.