ADVERTISEMENT

ಪ್ರಜಾವಾಣಿ ನ್ಯೂಸ್‌ ಕ್ವಿಜ್‌ ಇಂದಿನಿಂದ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2020, 19:06 IST
Last Updated 14 ನವೆಂಬರ್ 2020, 19:06 IST
ಪ್ರಜಾವಾಣಿ ನ್ಯೂಸ್‌ ಕ್ವಿಜ್‌
ಪ್ರಜಾವಾಣಿ ನ್ಯೂಸ್‌ ಕ್ವಿಜ್‌   

ಬೆಂಗಳೂರು: ಕನ್ನಡದ ವಿಶ್ವಾಸಾರ್ಹ ದಿನಪತ್ರಿಕೆ ‘ಪ್ರಜಾವಾಣಿ’ ಇಂದಿನಿಂದ ‘ಪ್ರಜಾವಾಣಿ ನ್ಯೂಸ್‌ ಕ್ವಿಜ್‌’ ಆರಂಭಿಸುತ್ತಿದೆ. ಡಿಸೆಂಬರ್‌ 27ರವರೆಗೆ ನಡೆಯುವ ಈ ರಸಪ್ರಶ್ನೆ ಸ್ಪರ್ಧೆಯ ವಿಜೇತರಿಗೆ ಬಂಪರ್‌ ಬಹುಮಾನ ಮಾರುತಿ ಸ್ವಿಫ್ಟ್‌ ಕಾರು. ಇತರ ಆಕರ್ಷಕ ಬಹುಮಾನಗಳನ್ನೂ ಗೆಲ್ಲುವ ಸುವರ್ಣಾವಕಾಶವಿದೆ.

ಓದುಗರಿಗೆ ಪ್ರತಿ ವಾರ ವಿಶೇಷ ಬಹುಮಾನ, ದಿನವೂ 20 ಆಕರ್ಷಕ ಬಹುಮಾನಗಳನ್ನೂ ತಮ್ಮದಾಗಿಸಿಕೊಳ್ಳುವ ಅವಕಾಶ ಇದೆ.

ಕ್ವಿಜ್‌ನಲ್ಲಿ ಭಾಗವಹಿಸಲು ಇರುವ ದಾರಿ ಸರಳ. ಸೋಮವಾರದಿಂದ ಶನಿವಾರದವರೆಗೆ ಪತ್ರಿಕೆಯ ಕ್ರೀಡಾಪುಟದಲ್ಲಿ ಪ್ರಕಟವಾಗುವ ಎರಡು ಸುಲಭ ಪ್ರಶ್ನೆಗಳಿಗೆ ಉತ್ತರ ನೀಡಬೇಕು. ಪ್ರತಿ ಪ್ರಶ್ನೆಗೆ ಮೂರು ಉತ್ತರಗಳ ಆಯ್ಕೆ ಇರುತ್ತದೆ. ಪ್ರತಿ ಭಾನುವಾರ ಐದು ಪ್ರಶ್ನೆಗಳು ಇರುತ್ತವೆ.

ADVERTISEMENT

ಬಂಪರ್‌ ಬಹುಮಾನ ಗೆಲ್ಲಲು ಭಾನುವಾರ ಪ್ರಕಟವಾಗುವ ಐದು ಕ್ವಿಜ್‌ಗಳ ಜೊತೆಗೆ ಇತರೆ 30 ದಿನಗಳ ಕ್ವಿಜ್‌ಗಳಿಗೂ ಉತ್ತರ ಕಳುಹಿಸಿರಬೇಕು. ವಾಚುಗಳನ್ನು ಗೆಲ್ಲಲು ನಾಲ್ಕು ಭಾನುವಾರದ ಕ್ವಿಜ್‌ಗಳ ಜೊತೆಗೆ ಇತರೆ 24 ದಿನಗಳ ಪ್ರಶ್ನೆಗಳಿಗೆ ಉತ್ತರ ಕಳುಹಿಸಿರಬೇಕು. ವಾಟರ್‌ ಪ್ಯೂರಿಫೈಯರ್‌ ಬಹುಮಾನಕ್ಕೆ ಮೂರು ಭಾನುವಾರದ ಕ್ವಿಜ್‌ಗಳ ಜೊತೆಗೆ 18 ದಿನಗಳ ಪ್ರಶ್ನೆಗಳಿಗೆ ಉತ್ತರಿಸಿರಬೇಕು. ದಿನನಿತ್ಯದ ಬಹುಮಾನ ವಿಜೇತರನ್ನು ಅದೃಷ್ಟದ ‘ಡ್ರಾ’ ಮೂಲಕ ಆಯ್ಕೆ ಮಾಡಲಾಗುತ್ತದೆ.

ಇನ್ನೇಕೆ ತಡ, ಬನ್ನಿ ಭಾಗವಹಿಸಿ, ಗೆಲ್ಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.