ADVERTISEMENT

ತಮಿಳಿನ ‘ಸರ್ಕಾರ್’ ಚಿತ್ರದ ಪೋಸ್ಟರ್‌ ಹರಿದು ಪ್ರತಿಭಟಿಸಿದ ಹೋರಾಟಗಾರ್ತಿ 

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2018, 10:28 IST
Last Updated 19 ನವೆಂಬರ್ 2018, 10:28 IST
   

ಬೆಳಗಾವಿ: ನಗರದ ವಿವಿಧೆಡೆ ಅಂಟಿಸಲಾಗಿದ್ದ ತಮಿಳು ಚಲನಚಿತ್ರ ‘ಸರ್ಕಾರ್’ ಪೋಸ್ಟರ್‌ಗಳನ್ನು ಕನ್ನಡ ಪರ ಹೋರಾಟಗಾರ್ತಿ ಕಸ್ತೂರಿ ಬಾವಿ ಅವರು ಸೋಮವಾರ ಹರಿದು ತಂದು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು.

ತಮಿಳುನಾಡಿನಲ್ಲಿ ಕನ್ನಡ, ಕನ್ನಡಿಗರಿಗೆ ಗೌರವ ಕೊಡುವುದಿಲ್ಲ. ಹೀಗಿರುವಾಗ ರಾಜ್ಯೋತ್ಸವ ಆಚರಿಸುವ ನವೆಂಬರ್ ತಿಂಗಳಲ್ಲೇ ತಮಿಳು ಪೋಸ್ಟರ್‌ಗಳನ್ನು ಅಂಟಿಸಲು ಬಿಟ್ಟಿರುವುದು ಸರಿಯಲ್ಲ. ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಪೋಸ್ಟರ್‌ಗಳನ್ನು ಗುಡ್ಡೆ ಹಾಕಿ ಬೆಂಕಿ ಹಚ್ಚಲು ಮುಂದಾದ ಅವರನ್ನು ತಡೆದ ಪೊಲೀಸರನ್ನು ತರಾಟೆಗೆ ತೆಗೆದುಕೊಂಡರು. ಬೆಂಕಿ ಹಚ್ಚಲು ಬಿಡಬೇಕು ಎಂದು ಪಟ್ಟು ಹಿಡಿದರು. ಅವರನ್ನು ಪೊಲೀಸರು ವಶಕ್ಕೆ ಪಡೆದರು. ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಬೆಂಕಿ ಹಚ್ಚಲು ತಂದಿದ್ದ ಪೋಸ್ಟರ್‌ಗಳನ್ನು ತೆರವುಗೊಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.