ADVERTISEMENT

‘ಕಾವೇರಿ’ ತಾಲ್ಲೂಕಿಗೆ ಆಗ್ರಹಿಸಿ ಕುಶಾಲನಗರ ಬಂದ್‌

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2019, 4:39 IST
Last Updated 11 ಫೆಬ್ರುವರಿ 2019, 4:39 IST
ತಾಲ್ಲೂಕು ಆಗದ ವಾಣಿಜ್ಯ ನಗರಿ... ‘ತಾಲ್ಲೂಕು ಕೇಂದ್ರ’ದ ನಿರೀಕ್ಷೆಯಲ್ಲಿದ್ದ ಕುಶಾಲನಗರ ಪಟ್ಟಣಕ್ಕೆ ಮತ್ತೊಮ್ಮೆ ನಿರಾಸೆ ಉಂಟಾಗಿದೆ
ತಾಲ್ಲೂಕು ಆಗದ ವಾಣಿಜ್ಯ ನಗರಿ... ‘ತಾಲ್ಲೂಕು ಕೇಂದ್ರ’ದ ನಿರೀಕ್ಷೆಯಲ್ಲಿದ್ದ ಕುಶಾಲನಗರ ಪಟ್ಟಣಕ್ಕೆ ಮತ್ತೊಮ್ಮೆ ನಿರಾಸೆ ಉಂಟಾಗಿದೆ   

ಕುಶಾಲನಗರ:‘ಕಾವೇರಿ ತಾಲ್ಲೂಕು’ಘೋಷಣೆ ಕೈಬಿಟ್ಟ ಮೈತ್ರಿ ಸರ್ಕಾರದ ಕ್ರಮ ಖಂಡಿಸಿ ಸೋಮವಾರ ಕುಶಾಲನಗರದಲ್ಲಿ ಸಂಪೂರ್ಣ ಬಂದ್ ನಡೆಯುತ್ತಿದೆ.

ಕೊಡಗು ಜಿಲ್ಲೆ, ಸೋಮವಾರಪೇಟೆ ತಾಲ್ಲೂಕಿನ ಕುಶಾಲನಗರ ಕೇಂದ್ರವಾಗಿಸಿಕೊಂಡು ಕಾವೇರಿ ತಾಲ್ಲೂಕು ರಚಿಸುವಂತೆ ಮನವಿ ಸಲ್ಲಿಸಲಾಗಿತ್ತು. ಎರಡು ವರ್ಷಗಳಿಂದ ಹೋರಾಟ ನಡೆಯುತ್ತಿದೆ. ಆದರೆ, ಕಳೆದ ಎರಡು ಬಜೆಟ್‌ನಲ್ಲೂ ಕಾವೇರಿ ತಾಲ್ಲೂಕು ಘೋಷಣೆ ಆಗಿಲ್ಲ. ಇದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಕಾವೇರಿ ತಾಲ್ಲೂಕು ಹೋರಾಟ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ಹಾಗೂ ರಸ್ತೆತಡೆ ನಡೆಯುತ್ತಿದ್ದು, ಅಂಗಡಿ ಮುಂಗಟ್ಟುಗಳು ಮುಚ್ವಿವೆ. ಬಂದ್‌ಗೆ ವಿವಿಧ ಸಂಘಟನೆಗಳೂ ಬೆಂಬಲ ನೀಡಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.