ADVERTISEMENT

ಪಿಎಸ್‌ಐ ನೇಮಕಾತಿ ಅಕ್ರಮ: ಸಿಐಡಿ ಪರ ವಕೀಲ ನೇಮಕ

PSI Scam Advocate

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2023, 15:51 IST
Last Updated 21 ಡಿಸೆಂಬರ್ 2023, 15:51 IST
ಸುಧನ್ವ ಡಿ.ಎಸ್
ಸುಧನ್ವ ಡಿ.ಎಸ್   

ಬೆಂಗಳೂರು: ಪಿಎಸ್‌ಐ 545 ಹುದ್ದೆಗಳ ನೇಮಕಾತಿ ಅಕ್ರಮದ ಬಗ್ಗೆ ವಿಚಾರಣೆ ನಡೆಸುತ್ತಿರುವ ನಿವೃತ್ತ ನ್ಯಾಯಮೂರ್ತಿ ಬಿ. ವೀರಪ್ಪ ನೇತೃತ್ವದ ಏಕಸದಸ್ಯ ಆಯೋಗದ ಎದುರು ಸಿಐಡಿ ಪರ ವಾದ ಮಂಡಿಸಲು ವಕೀಲ ಸುಧನ್ವ ಡಿ.ಎಸ್ ಅವರನ್ನು ನೇಮಕ ಮಾಡಿ ಗೃಹ ಇಲಾಖೆ ಆದೇಶ ಹೊರಡಿಸಿದೆ.

ನೇಮಕಾತಿ ಅಕ್ರಮ ಸಂಬಂಧ ತನಿಖೆ ನಡೆಸಿದ್ದ ಸಿಐಡಿ ಅಧಿಕಾರಿಗಳು, ಪೊಲೀಸ್ ನೇಮಕಾತಿ ವಿಭಾಗದ ಎಡಿಜಿಪಿ ಸೇರಿದಂತೆ ಹಲವರನ್ನು ಬಂಧಿಸಿ ನ್ಯಾಯಾಲಯಕ್ಕೆ ಈಗಾಗಲೇ ಆರೋಪ ಪಟ್ಟಿ ಸಲ್ಲಿಸಿದ್ದಾರೆ.

ಏಕ ಸದಸ್ಯ ಆಯೋಗ ರಚನೆಯಾಗುತ್ತಿದ್ದಂತೆ, ಅದರ ಎದುರು ಸಿಐಡಿ ಪರ ವಾದ ಮಂಡಿಸಲು ವಕೀಲ ಅಶೋಕ ನಾಯ್ಕ್ ಅವರನ್ನು ಈ ಹಿಂದೆ ನೇಮಿಸಲಾಗಿತ್ತು. ಒಬ್ಬರಿಂದ ಪರಿಣಾಮಕಾರಿ ವಾದ ಮಂಡಿಸಲು ಕಷ್ಟವೆಂದು ಸಿಐಡಿ ಹಿರಿಯ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದರು. ಇನ್ನೊಬ್ಬ ವಕೀಲರನ್ನು ನೇಮಿಸುವಂತೆ ಕೋರಿದ್ದರು. ಇದರ ಬೆನ್ನಲ್ಲೇ ವಕೀಲ ಸುಧನ್ವ ಅವರನ್ನು ನೇಮಕ ಮಾಡಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.