ಸಾಂದರ್ಭಿಕ ಚಿತ್ರ
ಬೆಂಗಳೂರು: ದ್ವಿತೀಯ ಪಿಯು ಪರೀಕ್ಷೆ-3ರ ಫಲಿತಾಂಶ ಪ್ರಕಟವಾಗಿದ್ದು, ಶೇ 22.78 ಫಲಿತಾಂಶ ದೊರೆತಿದೆ.
ದ್ವಿತೀಯ ಪಿಯು ಪರೀಕ್ಷೆ-1 ಮತ್ತು ಪರೀಕ್ಷೆ-2ರಲ್ಲಿ ಅನುತ್ತೀರ್ಣರಾದ 71,716 ವಿದ್ಯಾರ್ಥಿಗಳು ಪರೀಕ್ಷೆ-3ಕ್ಕೆ ಹಾಜರಾಗಿದ್ದರು. 16,136 ಮಂದಿ ತೇರ್ಗಡೆಯಾಗಿದ್ದಾರೆ. ಫಲಿತಾಂಶ ಸುಧಾರಣೆಗಾಗಿ ಪರೀಕ್ಷೆ ಬರೆದ 17,398 ವಿದ್ಯಾರ್ಥಿಗಳಲ್ಲಿ 11,937 ವಿದ್ಯಾರ್ಥಿಗಳು ಅಂಕಗಳನ್ನು ಹೆಚ್ಚಿಸಿಕೊಂಡಿದ್ದಾರೆ. ಮೂರೂ ಪರೀಕ್ಷೆಗಳಿಂದ 5,66,636 ಮಂದಿ ಉತ್ತೀರ್ಣರಾಗಿದ್ದು, ತೇರ್ಗಡೆಯ ಪ್ರಮಾಣ ಶೇ 79.81ಕ್ಕೆ ಏರಿಕೆಯಾಗಿದೆ.
ವಿದ್ಯಾರ್ಥಿಗಳು ಮತ್ತು ಪೋಷಕರು ಫಲಿತಾಂಶವನ್ನು ಜುಲೈ 1ರ ಮಧ್ಯಾಹ್ನ 1 ಗಂಟೆಯ ನಂತರ https://karresults.nic.in ಜಾಲತಾಣದಲ್ಲಿ ಪಡೆಯಬಹುದು. ಮೂರನೇ ಪರೀಕ್ಷೆ ತೇರ್ಗಡೆಯಾದವರಿಗೂ ಈ ಬಾರಿ ಸಿಇಟಿ ಮೂಲಕ ವಿವಿಧ ವೃತ್ತಿ ಶಿಕ್ಷಣ ಕೋರ್ಸ್‌ಗಳ ಪ್ರವೇಶಕ್ಕೆ ಅವಕಾಶ ಸಿಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.