ADVERTISEMENT

ಜಯಶ್ರೀ ದೇಶಪಾಂಡೆ ಸೇರಿ ಎಂಟು ಮಂದಿಗೆ ‘ಪುಸ್ತಕ ಪ್ರಶಸ್ತಿ’

​ಪ್ರಜಾವಾಣಿ ವಾರ್ತೆ
Published 7 ಜುಲೈ 2021, 19:31 IST
Last Updated 7 ಜುಲೈ 2021, 19:31 IST

ಬೆಂಗಳೂರು: ಲೇಖಿಕಾ ಸಾಹಿತ್ಯ ವೇದಿಕೆಯು 2020–21ನೇ ಸಾಲಿನ ‘ಪುಸ್ತಕ ಪ್ರಶಸ್ತಿ’ಯನ್ನು ಬುಧವಾರ ಪ್ರಕಟಿಸಿದ್ದು, ಬೆಂಗಳೂರಿನ ಜಯಶ್ರೀ ದೇಶಪಾಂಡೆ ಸೇರಿದಂತೆ ಎಂಟು ಮಂದಿ ಆಯ್ಕೆಯಾಗಿದ್ದಾರೆ.

ಕಥೆ ವಿಭಾಗದಲ್ಲಿ ಜಯಶ್ರೀ ದೇಶಪಾಂಡೆ ಅವರ ‘ಉತ್ತರಾರ್ಧ’, ಕಾವ್ಯ ವಿಭಾಗದಲ್ಲಿ ವಿಭಾ ಪುರೋಹಿತ್ ಅವರ ‘ಬಾಲ್ಕನಿ ಕಂಡ ಕವಿತೆಗಳು’, ಕಾದಂಬರಿ ವಿಭಾಗದಲ್ಲಿ ದಾವಣಗೆರೆಯ ಪಾಪು ಗುರು ಅವರ ‘ಸೂಜಿ’, ಪ್ರಬಂಧ ವಿಭಾಗದಲ್ಲಿ ಮಡಿಕೇರಿಯ ಸಹನಾ ಕಾಂತಬೈಲು ಅವರ ‘ಆನೆ ಸಾಕಲು ಹೊರಟವಳು’, ಪ್ರವಾಸ ಪ್ರಬಂಧ ವಿಭಾಗದಲ್ಲಿ ಬೆಂಗಳೂರಿನ ಎಸ್‌.ಪಿ. ವಿಜಯಲಕ್ಷ್ಮಿ ಅವರ ‘ಸಾಗರದಾಚೆಯ ನಾಡಿನಲ್ಲಿ’ ಕೃತಿ ಆಯ್ಕೆಯಾಗಿದೆ.

ಸಂಶೋಧನೆ ವಿಭಾಗದಲ್ಲಿ ಕಲಬುರ್ಗಿಯ ವಿವೇಕಾನಂದ ಸಜ್ಜನ್ ಅವರ‘ಕನ್ನಡ ರಾಮಾಯಣಗಳಲ್ಲಿ ರಾವಣ’, ವಿಭಿನ್ನ ಕೃತಿ ವಿಭಾಗದಲ್ಲಿ ಬೆಂಗಳೂರಿನ ನಾಗರತ್ನ ಮೂರ್ತಿ ಅವರ ‘ಕೀಲಿ ಕೈಯನುತಾರೆ ಕೀಲಿ ಕೈಯ’, ಹಾಗೂ ವಿಶೇಷ ಕೃತಿ ವಿಭಾಗದಲ್ಲಿ ಎಂ.ಎಸ್. ವಿದ್ಯಾ ಅವರ ‘ಕನ್ನಡ ರಂಗಭೂಮಿಯಲ್ಲಿ ಹಾಸ್ಯ’ ಪುಸ್ತಕವು ಪ್ರಶಸ್ತಿಗೆ ಭಾಜನವಾಗಿದೆ.

ADVERTISEMENT

ಬಂಟ್ವಾಳದ ರೇಷ್ಮಾ ಭಟ್ ಅವರ ‘ಕಥಾ ವ್ಯವಕಲನ’ ಹಾಗೂ ಹಾಸನದ ಸುಮಾ ವೀಣಾ ಅವರ ‘ಮನಸು ಕನ್ನಡಿ’ ಕೃತಿಯು ಮೆಚ್ಚುಗೆ ಪಡೆದಿವೆ ಎಂದು ಪ್ರಕಟಣೆ ತಿಳಿಸಿದೆ.

ಎಸ್‌.ವಿ. ಪ್ರಭಾವತಿ ಹಾಗೂ ಶೈಲಜಾ ಸುರೇಶ್ ಅವರು ಪ್ರಶಸ್ತಿಗಳ ಆಯ್ಕೆದಾರರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.