ADVERTISEMENT

ಕುರಾನ್‌ ವಾಕ್ಯಗಳು ಸಂವಿಧಾನದ ಆಶಯಕ್ಕೆ ವಿರುದ್ಧವಲ್ಲ: ಸಚಿವೆ ಜೊಲ್ಲೆ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2022, 18:21 IST
Last Updated 15 ಸೆಪ್ಟೆಂಬರ್ 2022, 18:21 IST
ಶಶಿಕಲಾ ಜೊಲ್ಲೆ
ಶಶಿಕಲಾ ಜೊಲ್ಲೆ   

ಬೆಂಗಳೂರು: ‘ಮುಸ್ಲಿಮರ ಧರ್ಮ ಗ್ರಂಥವಾದ ಕುರಾನ್‌ನಲ್ಲಿರುವ ವಾಕ್ಯಗಳು ದೇಶದ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿಲ್ಲ’ ಎಂದು ಮುಜರಾಯಿ ಹಾಗೂ ಹಜ್‌ ಮತ್ತು ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.

ವಿಧಾನ ಪರಿಷತ್‌ ಬಿಜೆಪಿ ಸದಸ್ಯ ಎನ್‌. ರವಿಕುಮಾರ್‌ ಅವರು, ‘ಕುರಾನ್‌ನಲ್ಲಿರುವ ವಾಕ್ಯಗಳು ದೇಶದ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ ಎಂಬುವುದರ ಕುರಿತು ಸರ್ಕಾರದ ನಿಲುವು ಏನು’ ಎಂಬ ಪ್ರಶ್ನೆಗೆ ಸಚಿವರು ಈ ಲಿಖಿತ ಉತ್ತರ ನೀಡಿದ್ದಾರೆ.

‘ಕುರಾನ್‌ನಲ್ಲಿರುವ ಸುರ ಆಯತ್‌ 3:85, ಸುರ ವರ್ಸೆ 9:5, 8:12, 3:118, 3:28, 9:23, 66.9 ಈ ವಾಕ್ಯಗಳ ಅರ್ಥವೇನು ಎಂಬ ಪ್ರಶ್ನೆಗೆ, ‘ಈ ವಾಕ್ಯಗಳನ್ನು ಅವುಗಳ ಹಿನ್ನೆಲೆಯೊಂದಿಗೆ ಧಾರ್ಮಿಕ ವಿದ್ವಾಂಸರು ಮಾತ್ರ ಅರ್ಥೈಯಿಸಬಹುದಾಗಿದೆ. 3ರಿಂದ 10 ವರ್ಷ ಒಳಗಿನ ಮಕ್ಕಳಲ್ಲಿ ಸಮಾಜದ ಇತರ ಧರ್ಮಗಳ ವಿರುದ್ಧವಾದ ದ್ವೇಷ ಭಾವನೆಗಳನ್ನು ತುಂಬುವ ಇಂಥ ಪಾಠಗಳನ್ನು ಮದರಸಗಳಲ್ಲಿ ಮಾಡುವುದರಿಂದ ಶಾಂತಿ ಸುವ್ಯವಸ್ಥೆಗೆ ಭಂಗ ಉಂಟಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿಯೇ’ ಎಂಬ ಪ್ರಶ್ನೆಗೆ ಸಚಿವರು, ‘ಈವರೆಗೆ ಅಂಥ ಯಾವುದೇ ವಿಷಯ ಗಮನಕ್ಕೆ ಬಂದಿಲ್ಲ. ಬಂದರೆ, ಕಾನೂನಿನ ಅನ್ವಯ ಕ್ರಮ ತೆಗೆದುಕೊಳ್ಳಲಾಗುವುದು’ ಎಂದೂ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.