ಬೆಂಗಳೂರು: ರಾಹುಲ್ ಗಾಂಧಿ ಲೋಕಸಭೆ ವಿರೋಧ ಪಕ್ಷದ ನಾಯಕ ಆಗಿರುವವರೆಗೆ ಕಾಂಗ್ರೆಸ್‌ಗೆ ಭವಿಷ್ಯವಿಲ್ಲ. ಅವರಿಗೆ ರಚನಾತ್ಮಕತೆಯ ಅರಿವಿಲ್ಲ ಎಂದು ಬಿಜೆಪಿ ಶಾಸಕ ಎಸ್.ಸುರೇಶ್ ಕುಮಾರ್ ದೂರಿದರು.
ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ವಿರೋಧ ಪಕ್ಷದ ನಾಯಕರಾಗಿ ರಾಹುಲ್ ಮುಂದುವರಿಯುವುದು ಕಾಂಗ್ರೆಸ್‌ಗೆ ಅಷ್ಟೇ ಅಲ್ಲ, ದೇಶಕ್ಕೂ ಹಾನಿ. ಲೋಕಸಭೆಯಲ್ಲಿ ರಾಮ್ ಸುಭಾಸ್ ಸಿಂಗ್, ವೈ.ಬಿ. ಚವ್ಹಾಣ್, ಸಿ.ಎಂ. ಸ್ಟೀಫನ್, ಜಗಜೀವನ್ ರಾಮ್, ರಾಜೀವ್ ಗಾಂಧಿ, ಎಲ್.ಕೆ. ಅಡ್ವಾಣಿ, ಅಟಲ್ ಬಿಹಾರಿ ವಾಜಪೇಯಿ, ನರಸಿಂಹರಾವ್, ಶರದ್ ಪವಾರ್, ಸುಷ್ಮಾ ಸ್ವರಾಜ್ ಮೊದಲಾದವರು ವಿರೋಧ ಪಕ್ಷದ ನಾಯಕರಾಗಿ ಕೆಲಸ ಮಾಡಿದ್ದಾರೆ. ಅವರ ಸಾಮರ್ಥ್ಯ, ತಿಳಿವಳಿಕೆ, ವಿಶ್ವಾಸಾರ್ಹತೆ, ದೇಶಕ್ಕೆ, ಆಳುವ ಪಕ್ಷಕ್ಕೆ ನೀಡುತ್ತಿದ್ದ ಮಾರ್ಗದರ್ಶನ ಅನನ್ಯವಾಗಿತ್ತು. ರಾಹುಲ್ ಅಂಥವರು ನಾಯಕರಾಗಿರುವುದು ಲೋಕಸಭೆಯ ದುರದೃಷ್ಟ ಎಂದರು.
ಸ್ವಾತಂತ್ರ್ಯ ಉದ್ಯಾನದಲ್ಲಿ ಭಾಷಣ ಮಾಡಿದ ನಂತರ ಪಕ್ಕದಲ್ಲೇ ಇರುವ ಚುನಾವಣಾ ಆಯೋಗದ ಕಚೇರಿಗೆ ಹೋಗಿ ದೂರು ನೀಡಿಲ್ಲ. ಇದು ‘ಹಿಟ್ ಆ್ಯಂಡ್ ರನ್’ ನಡೆ. ದೂರು ಕೊಡಲು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಕಳಿಸಿದ್ದಾರೆ. ಮತ ಕಳವು ವಿರುದ್ಧ ಅವರ ಆರೋಪದ ಭಾಷಣ ಮಳೆಯಲ್ಲಿ ನೆನೆದ ಶಿವಕಾಶಿ ಪಟಾಕಿಯಂತೆ ಠುಸ್ ಆಗಿದೆ ಎಂದು ದೂರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.