ADVERTISEMENT

ಹೊಸಪೇಟೆ ಸೇರಿ ರಾಜ್ಯದ ಹಲವೆಡೆ ತಂಪೆರೆದ ಬಿರುಗಾಳಿ ಮಳೆ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2019, 12:02 IST
Last Updated 4 ಏಪ್ರಿಲ್ 2019, 12:02 IST
ಮಳೆ ನಿಂತ ಬಳಿಕ ಮೋಡವನ್ನು ಬೇಧಿಸಿ, ಹೊರ ಬಂದ ಸೂರ್ಯನ ಕಿರಣಗಳ ಈ ಸುಂದರ ದೃಶ್ಯಕಾವ್ಯ ಹೊಸಪೇಟೆಯ ಬಸ್‌ ನಿಲ್ದಾಣ ರಸ್ತೆಯಲ್ಲಿ ಗುರುವಾರ ಕಂಡು ಬಂತುಪ್ರಜಾವಾಣಿ ಚಿತ್ರ: ಬಿ. ಬಾಬುಕುಮಾರ
ಮಳೆ ನಿಂತ ಬಳಿಕ ಮೋಡವನ್ನು ಬೇಧಿಸಿ, ಹೊರ ಬಂದ ಸೂರ್ಯನ ಕಿರಣಗಳ ಈ ಸುಂದರ ದೃಶ್ಯಕಾವ್ಯ ಹೊಸಪೇಟೆಯ ಬಸ್‌ ನಿಲ್ದಾಣ ರಸ್ತೆಯಲ್ಲಿ ಗುರುವಾರ ಕಂಡು ಬಂತುಪ್ರಜಾವಾಣಿ ಚಿತ್ರ: ಬಿ. ಬಾಬುಕುಮಾರ   

ಹೊಸಪೇಟೆ: ನಗರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಗುರುವಾರ ಸಂಜೆ ಬಿರುಗಾಳಿ ಸಹಿತ ಮಳೆ ಸುರಿಯಿತು.

ಬೆಳಿಗ್ಗೆಯಿಂದ ರಣಬಿಸಿಲು ಇತ್ತು. ಸಂಜೆ ಏಕಾಏಕಿ ದಟ್ಟ ಕಾರ್ಮೋಡ ಆವರಿಸಿಕೊಂಡು, ಬಿರುಗಾಳಿಯೊಂದಿಗೆ ಜೋರಾಗಿ ಮಳೆ ಸುರಿಯಿತು.

ಸಂಜೆ 4.15ಕ್ಕೆ ಆರಂಭವಾದ ವರ್ಷಧಾರೆ 4.40ರ ವರೆಗೆ ಎಡೆಬಿಡದೆ ಸುರಿಯಿತು. ಅಕಾಲಿಕ ಮಳೆಯಿಂದ ವಾತಾವರಣ ಸಂಪೂರ್ಣ ತಂಪಾಗಿತ್ತು. ಕೆಲವು ದಿನಗಳಿಂದ ತಾಪಮಾನ 40ರಿಂದ 41 ಡಿಗ್ರಿ ಸೆಲ್ಸಿಯಸ್‌ ಇರುತ್ತಿದ್ದು, ಕೆಂಡದಂತಹ ಬಿಸಿಲಿನಿಂದ ಜನ ಕಂಗೆಟ್ಟಿದ್ದರು. ವರ್ಷದ ಮೊದಲ ಮಳೆಯ ಸಿಂಚನದಿಂದ ಜನ ಸ್ವಲ್ಪ ನೆಮ್ಮದಿಯ ನಿಟ್ಟುಸಿರು ಬಿಡುವಂತಾಯಿತು.

ADVERTISEMENT

ತಾಲ್ಲೂಕಿನ ಕಮಲಾಪುರ, ಹೊಸೂರು, ಕೊಂಡನಾಯಕನಹಳ್ಳಿ, ಮಲಪನಗುಡಿ, ಹೊಸಮಲಪನಗುಡಿ, ನಾಗೇನಹಳ್ಳಿ, ಬಸವನದುರ್ಗ ಸೇರಿದಂತೆ ಇತರೆ ಕಡೆಗಳಲ್ಲಿಯೂ ಮಳೆಯಾಗಿರುವುದು ವರದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.