ADVERTISEMENT

ಕೊಡಗಿನಲ್ಲಿ ಮಳೆಯ ಸಿಂಚನ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2020, 14:21 IST
Last Updated 27 ಫೆಬ್ರುವರಿ 2020, 14:21 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮಡಿಕೇರಿ: ಕೊಡಗು ಜಿಲ್ಲೆಯ ವಿವಿಧೆಡೆ ಗುರುವಾರ ಸಂಜೆ ಮಳೆಯ ಸಿಂಚನವಾಗಿದೆ. ಜಿಲ್ಲೆಯಲ್ಲಿ ಮಧ್ಯಾಹ್ನದ ಬಳಿಕ ಮೋಡ ಕವಿದ ವಾತಾವರಣವಿತ್ತು. ಸಂಜೆ ವೇಳೆ ಕಕ್ಕಬ್ಬೆ ವ್ಯಾಪ್ತಿಯ ಮರಂದೋಡು, ಪೊದ್ದುಮಾನಿ, ಕೋಕೇರಿ ಸುತ್ತಮುತ್ತ ಮಳೆ ಸುರಿದಿದೆ.

ಈ ಸಮಯದಲ್ಲಿ ಜೋರು ಮಳೆಯಾದರೆ ಮಾತ್ರ ಕಾಫಿ ಬೆಳೆಗೆ ಅನುಕೂಲ. ಸಾಧಾರಣ ಮಳೆ ಸುರಿದು ಹೋದರೆ ಮುಂದಿನ ವರ್ಷದ ಕಾಫಿ ಫಸಲಿನ ಮೇಲೆ ಪರಿಣಾಮ ಬೀರಲಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT