
ವಿಜಯಪುರ ಜಿಲ್ಲೆಯ ಚಡಚಣ ತಾಲ್ಲೂಕಿನ ನಿವರಗಿ ಗ್ರಾಮದಲ್ಲಿ ಬಿರುಗಾಳಿಗೆ ದ್ರಾಕ್ಷಿ ಬಳ್ಳಿಗಳ ಸಾಲು ನೆಲಕ್ಕುರುಳಿದೆ
ಹುಬ್ಬಳ್ಳಿ: ವಿಜಯಪುರ, ಬಾಗಲಕೋಟೆ ಮತ್ತು ಗದಗ ಜಿಲ್ಲೆಯಲ್ಲಿ ಸೋಮವಾರ ಬಿರುಗಾಳಿ ಸಹಿತ ಮಳೆಯಾಯಿತು. ವರ್ಷದ ಮೊದಲ ಮಳೆಯು, ವಾತಾವರಣವನ್ನು ತಂಪಾಗಿಸಿತು.
ವಿಜಯಪುರ ನಗರ, ತಿಕೋಟಾ ಮತ್ತು ಚಡಚಣ ತಾಲ್ಲೂಕು ವ್ಯಾಪ್ತಿ ಹಾಗೂ ಹೊರ್ತಿ, ನಿವರಗಿ, ಇಂಚಗೇರಿಯಲ್ಲಿ ಗುಡುಗು, ಸಿಡಿಲು ಸಹಿತ ಮಳೆಯಾಯಿತು.
ಜಿಲ್ಲೆಯಾದ್ಯಂತ ದ್ರಾಕ್ಷಿ ಬೆಳೆ ಕಟಾವಿಗೆ ಬಂದಿದ್ದು, ಒಣ ದ್ರಾಕ್ಷಿ ತಯಾರಿಕೆಗೆ ಸಜ್ಜಾಗಿರುವ ಹೊತ್ತಿ
ನಲ್ಲಿ ಮಳೆ ಆಗಿರುವುದು ತೊಂದರೆಯಾಗಿದೆ. ಚಡಚಣ ತಾಲ್ಲೂಕಿನ ನಿವರಗಿಯಲ್ಲಿ ಗಾಳಿಗೆ ದ್ರಾಕ್ಷಿ ಸಾಲು ನೆಲಕ್ಕುರುಳಿದೆ.
ಬಾಗಲಕೋಟೆ ಜಿಲ್ಲೆಯ ಅಮೀನಗಡ, ನೀರಲಕೇರಿ ಸೇರಿ ವಿವಿಧೆಡೆ 10 ನಿಮಿಷಕ್ಕೂ ಹೆಚ್ಚು ಸಮಯ ತುಂತುರು ಮಳೆಯಾಯಿತು., ಅಮೀನಗಡ, ಕಮತಗಿ, ಮಹಾಲಿಂಗಪುರ, ರಬಕವಿ, ಹುನಗುಂದದಲ್ಲೂ ಮಳೆಯಾಯಿತು.
ಗದಗ ಜಿಲ್ಲೆಯಲ್ಲಿ ಮುಂಡರಗಿ ಮತ್ತು ರೋಣ ತಾಲ್ಲೂಕಿನ ಕೆಲವೆಡೆ ಮಳೆಯಾಯಿತು. ಬೆಳೆಗಳ ಒಕ್ಕಣೆ ಪ್ರಕ್ರಿಯೆ ಇನ್ನೂ ನಡೆದಿಲ್ಲ. ಕಡಲೆ, ಜೋಳ, ಕುಸುಬೆ, ಗೋಧಿ ಬೆಳೆಯನ್ನು ರಕ್ಷಿಸಿ
ಕೊಳ್ಳಲು ಹರಸಾಹಸಪಟ್ಟರು.
ಕಲ್ಯಾಣದ ಕರ್ನಾಟಕದ ಕಲಬುರಗಿ, ಬೀದರ್, ಕೊಪ್ಪಳ ಸೇರಿದಂತೆ ವಿವಿಧೆಡೆ ಸೋಮವಾರ ತುಂತುರು ಮಳೆಯಾಗಿದೆ.
ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ಹುಲೆಗುಡ್ಡ ಗ್ರಾಮದಲ್ಲಿ ಸೋಮವಾರ ಸಿಡಿಲು ಬಡಿದು ಎತ್ತೊಂದು ಮೃತಪಟ್ಟಿದೆ. ರೈತ ಅಜ್ಜಪ್ಪ ಬಂಡ್ಲಿ ಅವರಿಗೆ ಸೇರಿದ ತೋಟದಲ್ಲಿ ಎರಡು ಎತ್ತುಗಳನ್ನು ಕಟ್ಟಲಾಗಿತ್ತು. ಮಧ್ಯಾಹ್ನ ಗುಡುಗು ಮಿಂಚು ಸಹಿತ ಮಳೆಯ ವೇಳೆ ಸಿಡಿಲು ಬಡಿದು ಎತ್ತು ಮೃತಪಟ್ಟಿದೆ.
ಕಲಬುರಗಿ ನಗರದ, ಚಿಂಚೋಳಿ ಸೇರಿದಂತೆ ಕೆಲವೆಡೆ ಸಂಜೆ ತುಂತುರು ಮಳೆಯಾಗಿದೆ. ಬೀದರ್ ಜಿಲ್ಲೆಯ ಬೀದರ್, ಭಾಲ್ಕಿಯಲ್ಲಿ ಸೋಮವಾರ ಸಂಜೆ ಕೆಲ ಗಳಿಗೆ ಸಾಧಾರಣ ಮಳೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.