ADVERTISEMENT

ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಗುಡುಗು ಸಹಿತ ಭಾರಿ ಮಳೆ 

​ಪ್ರಜಾವಾಣಿ ವಾರ್ತೆ
Published 2 ಜೂನ್ 2019, 14:52 IST
Last Updated 2 ಜೂನ್ 2019, 14:52 IST
   

ಬೆಂಗಳೂರು: ನಗರ ಸೇರಿದಂತೆ ರಾಜ್ಯದ ಹಲವೆಡೆ ಭಾನುವಾರ ಸಂಜೆ ಗುಡುಗು ಸಹಿತ ಭಾರಿ ಮಳೆಯಾಗಿದೆ.

ಬೆಂಗಳೂರಿನ ಲಾಲ್‌ಬಾಗ್‌, ರಿಚ್ಮಂಡ್‌ಸರ್ಕಲ್‌, ಹಲಸೂರು, ಟ್ರಿನಿಟಿ,ಎಂ.ಜಿ.ರಸ್ತೆ, ಶಿವಾಜಿನಗರ ಸೇರಿದಂತೆ ಹಲವಡೆ ಮಳೆಯಾಗಿದ್ದು, ವಾಹನ ಸವಾರರು ಪರದಾಡುವಂತಾಯಿತು.

ಕಲಬುರ್ಗಿ: ನಗರದಲ್ಲಿ ಭಾನುವಾರ ಮಧ್ಯಾಹ್ನ ಅರ್ಧಗಂಟೆ ಬಿರುಸಿನ ಮಳೆ ಸುರಿಯಿತು. ಇದರಿಂದಾಗಿ ರಸ್ತೆಗಳಲ್ಲಿ ನೀರು ಹರಿಯಿತು. ಬೆಳಿಗ್ಗೆಯಿಂದಲೇ ಬಿಸಿಲ ಝಳದಿಂದ ಕಂಗೆಟ್ಟಿದ್ದ ಜನತೆ ಮಳೆ ಬಂದ ಕೂಡಲೇ ನೆಮ್ಮದಿಯ ನಿಟ್ಟಿಸಿರು ಬಿಟ್ಟರು. ಮಕ್ಕಳು ಮರದ ಕೆಳಗಡೆ ನಿಂತು ಮರದಲ್ಲಿ ರೆಂಬೆಗಳನ್ನು ಅಲುಗಾಡಿಸಿದರು. ಮಳೆ ನೀರು ಮೈಮೇಲೆ ಬಿದ್ದ ಕೂಡಲೇ ಪುಳಕಗೊಂಡರು.

ADVERTISEMENT

ರಾಯಚೂರು: ಜಿಲ್ಲೆಯ ವಿವಿಧ ಕಡೆಗಳಲ್ಲಿ ಭಾನುವಾರ ಸಂಜೆ ಅರ್ಧ ಗಂಟೆಗೂ ಹೆಚ್ಚು ಸಮಯ ಮಳೆ ಸುರಿದಿದ್ದರಿಂದ ಎಲ್ಲೆಡೆ ತಂಪು ವಾತಾವರಣ ಹರಡಿತು.

ರಾಯಚೂರು ನಗರದಲ್ಲಿ ಸ್ವಲ್ಪ ಕಾಲ ಮಳೆ ಸುರಿದರೂ ಮೋಡಗಳು ಕವಿದಿದ್ದರಿಂದ ಸಂಜೆಯಿಂದ ತಂಪಾದ ಗಾಳಿ ಬೀಸಿತು. ಇದರಿಂದ ಭಾನುವಾರ 42 ಡಿಗ್ರಿ ಸೆಲ್ಸಿಯಸ್ ತಾಪಮಾನದಿಂದ ಬಳಲಿದ್ದ ಜನರು, ಹಿತವಾದ ಗಾಳಿಯಿಂದಾಗಿ ನೆಮ್ಮದಿಯ ನಿಟ್ಟಿಸಿರು ಬಿಡುವಂತಾಯಿತು. ಜೂನ್ ಆರಂಭದಿಂದ ತಾಪಮಾನ ಕಡಿಮೆಯಾಗಿ ಉತ್ತಮ ರೀತಿಯಲ್ಲಿ ಮಳೆ ಬೀಳುವಂತಾಗಲಿ ಎಂದು ಜನರು ಪರಸ್ಪರ ಮುಂಗಾರು ಮಳೆಯ ಬಗ್ಗೆ ಆಶಾಭಾವ ವ್ಯಕ್ತಪಡಿಸುತ್ತಿರುವುದು ಕಂಡು ಬಂತು.

ಶಕ್ತಿನಗರ, ಮಾನ್ವಿ‌, ಕವಿತಾಳ, ಜಾಲಹಳ್ಳಿ ಹಾಗೂ ಮಸ್ಕಿಯಲ್ಲಿ ಅರ್ಧಗಂಟೆಗೂ ಹೆಚ್ಚು ಸಮಯ ಮಳೆ ಬಿದ್ದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.