ADVERTISEMENT

ಎಚ್‌.ಟಿ. ಪೋತೆ ಸೇರಿ ಮೂವರಿಗೆ ‘ರಾಜಲಕ್ಷ್ಮಿ ಬರಗೂರು ಪುಸ್ತಕ ಪ್ರಶಸ್ತಿ’

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2022, 10:06 IST
Last Updated 3 ಮಾರ್ಚ್ 2022, 10:06 IST
   

ಬೆಂಗಳೂರು: ಡಾ.ಬರಗೂರುಪ್ರತಿಷ್ಠಾನ ನೀಡುವ ‘ರಾಜಲಕ್ಷ್ಮಿಬರಗೂರುಪುಸ್ತಕ ಪ್ರಶಸ್ತಿ’ಗೆ ಎಚ್‌.ಟಿ. ಪೋತೆ ಅವರ ‘ದಲಿತ ಅಸ್ಮಿತೆ’ ಮತ್ತು ಕೆ. ಕೇಶವ ಶರ್ಮ ‘ಕಾರಣವಾದ’ ಕೃತಿಗಳು ಆಯ್ಕೆಯಾಗಿವೆ.

ಕಾದಂಬರಿ ವಿಭಾಗದಲ್ಲಿ ಮಲ್ಲಿಕಾರ್ಜುನ ಹಿರೇಮಠ ಅವರ ‘ಹಾವಳಿ’ ಕಾದಂಬರಿಯನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರತಿಷ್ಠಾನವುವಿಚಾರ, ವಿಮರ್ಶೆ ಮತ್ತು ಕಾದಂಬರಿ ಪ್ರಕಾರದಲ್ಲಿ‍ಪ್ರತಿ ವರ್ಷ ಪ್ರಶಸ್ತಿ ನೀಡುತ್ತಿದೆ.ಈ ಪ್ರಶಸ್ತಿಯು ತಲಾ ₹ 10 ಸಾವಿರ ನಗದು ಬಹುಮಾನ ಹಾಗೂ ಫಲಕವನ್ನು ಹೊಂದಿದೆ.

ರಾಜಲಕ್ಷ್ಮಿ ಅವರ ಜನ್ಮದಿನವಾದ ಮಾ.12ರಂದು ಬೆಂಗಳೂರಿನ ಗಾಂಧಿ ಭವನದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಸಲಾಗುವುದು ಎಂದು ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿಗಳಾದ ಸುಂದರಾಜ ಅರಸ್ ಹಾಗೂ ರಾಜಪ್ಪ ದಳವಾಯಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.