ADVERTISEMENT

ನಿರ್ಬಂಧದ ಮಧ್ಯೆ ಈದ್ ಉಲ್‌ ಫಿತ್ರ್ ಇಂದು

​ಪ್ರಜಾವಾಣಿ ವಾರ್ತೆ
Published 24 ಮೇ 2020, 19:11 IST
Last Updated 24 ಮೇ 2020, 19:11 IST
ಕಲಬುರ್ಗಿಯ ಸಂತ್ರಾಸವಾಡಿಯಲ್ಲಿರುವ ಜ್ಯಾಮಿಯಾ ಮಸೀದಿಯನ್ನು ಈದ್-ಉಲ್-ಫಿತರ್ (ರಂಜಾನ್) ಹಬ್ಬದ ಪ್ರಯುಕ್ತ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ. (ಚಿತ್ರ: ಪ್ರಶಾಂತ್ ಎಚ್‌.ಜಿ.)
ಕಲಬುರ್ಗಿಯ ಸಂತ್ರಾಸವಾಡಿಯಲ್ಲಿರುವ ಜ್ಯಾಮಿಯಾ ಮಸೀದಿಯನ್ನು ಈದ್-ಉಲ್-ಫಿತರ್ (ರಂಜಾನ್) ಹಬ್ಬದ ಪ್ರಯುಕ್ತ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ. (ಚಿತ್ರ: ಪ್ರಶಾಂತ್ ಎಚ್‌.ಜಿ.)   

ಬೆಂಗಳೂರು: ಕರಾವಳಿ ಜಿಲ್ಲೆಗಳನ್ನು ಹೊರತುಪಡಿಸಿ ರಾಜ್ಯದಾದ್ಯಂತ ಈದ್ ಉಲ್‌ ಫಿತ್ರ್ ಹಬ್ಬ ಸೋಮವಾರ (ಮೇ 25) ಆಚರಿಸಲಾಗುವುದು. ಕರಾವಳಿ ಜಿಲ್ಲೆಗಳಲ್ಲಿ ಹಬ್ಬದ ಆಚರಣೆ ಭಾನುವಾರ ಸರಳವಾಗಿ ನಡೆಯಿತು.

ಲಾಕ್ ಡೌನ್ ಕಾರಣದಿಂದ ಮಸೀದಿ ಅಥವಾ ಸಾಮೂಹಿಕವಾಗಿ ಈದ್ ಪ್ರಾರ್ಥನೆ ಸಲ್ಲಿಸಲು ಅವಕಾಶ ಇಲ್ಲ. ಹೀಗಾಗಿ, ಆರೋಗ್ಯಕ್ಕೆ ಸಂಬಂಧಿಸಿದ ಎಲ್ಲ ಮುನ್ನೆಚ್ಚರಿಕೆಗಳನ್ನು ಗಮನದಲ್ಲಿಟ್ಟುಕೊಂಡು ಹಬ್ಬವನ್ನು ಆಚರಿಸುವಂತೆ ಮುಸ್ಲಿಂ ಧಾರ್ಮಿಕ ಮುಖಂಡರು ಈಗಾಗಲೇ ಮನವಿ ಮಾಡಿದ್ದಾರೆ.

‘ಮಸೀದಿಗಳಲ್ಲಿ ಬೆಳಿಗ್ಗೆ ಐದು ಮಂದಿಗೆ ಮೀರದಂತೆ ಈದ್‌ ಪ್ರಾರ್ಥನೆ ಸಲ್ಲಿಸಬಹುದು. ಉಳಿದವರು ತಮ್ಮ ಮನೆಗಳಲ್ಲಿಯೇ ಇಸ್ಲಾಮಿಕ್‌ ನಿಯಮ ಮತ್ತು ಸರ್ಕಾರದ ನಿರ್ದೇಶನಗಳನ್ನು ಗಮನದಲ್ಲಿಟ್ಟು ಪ್ರಾರ್ಥನೆ ಸಲ್ಲಿಸಬೇಕು. ಶುಭಾಶಯ ವಿನಿಮಯ ಮಾಡುವ ವೇಳೆ ಕೈ ಕುಲುಕುವುದು, ಆಲಿಂಗನ ಮಾಡುವುದನ್ನು ನಿರ್ಬಂಧಿಸಲಾಗಿದೆ. ಮನೆಯಿಂದ ಅನಗತ್ಯವಾಗಿ ಹೊರಗೆ ಹೋಗಬೇಡಿ. ಸ್ನೇಹಿತರು, ಸಂಬಂಧಿಕರನ್ನು ಭೇಟಿ ಮಾಡಲು ತೆರಳುವುದನ್ನು ಮುಂದೂಡಿ’ ಎಂದೂ ಮುಖಂಡರು ವಿನಂತಿಸಿದ್ದಾರೆ.

ADVERTISEMENT

‘ಅತ್ಯಂತ ಸರಳವಾಗಿ ಆಚರಿಸಬೇಕು. ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಿ, ನೆರವಿನ ಅಗತ್ಯ ಇರುವವರಿಗೆ ಸಹಾಯ ಹಸ್ತ ಚಾಚಬೇಕು’ ಎಂಬ ಸೂಚನೆಯನ್ನು ಪಾಲಿಸಿ ಕರಾವಳಿ ಜಿಲ್ಲೆಯ ಮುಸ್ಲಿಮರು ಹಬ್ಬ ಆಚರಿಸಿದರು. ನಿರ್ಬಂಧದ ಕಾರಣದಿಂದ ಸಾಮೂಹಿಕವಾಗಿ ಪ್ರಾರ್ಥನೆ ನಡೆಯುವ ಮೈದಾನಗಳಲ್ಲಿ ಹಬ್ಬದ ರಂಗು ಇರಲಿಲ್ಲ. ಕೆಲವು ಮಸೀದಿಗಳಿಂದ ಯೂಟ್ಯೂಬ್ ಮೂಲಕ ಈದ್ ಸಂದೇಶ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.