ADVERTISEMENT

ಪಡಿತರ: 14 ಜಿಲ್ಲೆಗಳಲ್ಲಿ 3 ಕೆ.ಜಿ ರಾಗಿ, 2 ಕೆ.ಜಿ ಅಕ್ಕಿ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2021, 21:25 IST
Last Updated 27 ಏಪ್ರಿಲ್ 2021, 21:25 IST

ಬೆಂಗಳೂರು: ‘ರಾಗಿಯನ್ನು ಆಹಾರಧಾನ್ಯವಾಗಿ ಬಳಸುವ 14 ಜಿಲ್ಲೆಗಳಲ್ಲಿ ಬಿಪಿಎಲ್‌ (ಆದ್ಯತಾ) ಪಡಿತರ ಚೀಟಿದಾರರಿಗೆ 5 ಕೆ.ಜಿ ಆಹಾರಧಾನ್ಯದ ಪೈಕಿ, 3 ಕೆ.ಜಿ ರಾಗಿ ಮತ್ತು 2 ಕೆ.ಜಿ ಅಕ್ಕಿ ವಿತರಿಸಲಾಗುತ್ತಿದೆ’ ಎಂದು ಆಹಾರ ಇಲಾಖೆಯ ಆಯುಕ್ತರಾದ ಶಮ್ಲಾ ಇಕ್ಬಾಲ್‌ತಿಳಿಸಿದ್ದಾರೆ.

‘2020–21ನೇ ಸಾಲಿನ ಮುಂಗಾರು ಅವಧಿಯಲ್ಲಿ ಕೇಂದ್ರ ಸರ್ಕಾರದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ 2.62 ಲಕ್ಷ ಟನ್‌ ಭತ್ತ, 4.52 ಟನ್‌ ರಾಗಿ ಮತ್ತು 72,238 ಟನ್‌ ಜೋಳ ಖರೀದಿಸಲಾಗಿದೆ. ಹೀಗೆ ಸಂಗ್ರಹಿಸಿದ ಆಹಾರಧಾನ್ಯವನ್ನು ರಾಜ್ಯದಲ್ಲಿಯೇ ಬಳಸಿಕೊಳ್ಳುವಂತೆ ಕೇಂದ್ರ ಸೂಚಿಸಿದೆ. ಹೀಗಾಗಿ, ಈ ಕ್ರಮ ತೆಗೆದುಕೊಳ್ಳಲಾಗಿದೆ’ ಎಂದು ಅವರು ಹೇಳಿದ್ದಾರೆ.

‘ಜೋಳ ಸಂಗ್ರಹ ಕಡಿಮೆ ಇರುವುದರಿಂದ ಜೋಳ ಸಂಗ್ರಹಿಸಿದ ರಾಯಚೂರು, ಯಾದಗಿರಿ ಮತ್ತು ಬಳ್ಳಾರಿ ಜಿಲ್ಲೆಯಲ್ಲಿ ಮೇ ತಿಂಗಳಲ್ಲಿ 3 ಕೆ.ಜಿ ಜೋಳ ಮತ್ತು 2 ಕೆ.ಜಿ ಅಕ್ಕಿ ವಿತರಿಸಲು ಉದ್ದೇಶಿಸಲಾಗಿದೆ.

ADVERTISEMENT

ಉಳಿದ ಜಿಲ್ಲೆಗಳಲ್ಲಿ ಪ್ರತಿ ತಿಂಗಳು 5 ಕಿಲೋ ಅಕ್ಕಿ ವಿತರಿಸಲಾಗುವುದು’ ಎಂದೂ ಅವರು ಮಾಹಿತಿನೀಡಿದ್ದಾರೆ.

‘ಅಕ್ಕಿ ಉಪಯೋಗಿಸುವ ಕರಾವಳಿ ಜಿಲ್ಲೆಗಳಲ್ಲಿ ಬಿಪಿಎಲ್‌ ಪಡಿತರ ಚೀಟಿದಾರರಿಗೆ ಪ್ರತಿ ತಿಂಗಳು 5 ಕೆ.ಜಿ ಅಕ್ಕಿ ವಿತರಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.