ADVERTISEMENT

ಚುನಾವಣೆಗೆ ಸಿದ್ಧರಾಗಿ: ನಿಖಿಲ್ ಹೇಳಿಕೆ ವೈರಲ್‌

​ಪ್ರಜಾವಾಣಿ ವಾರ್ತೆ
Published 6 ಜೂನ್ 2019, 20:17 IST
Last Updated 6 ಜೂನ್ 2019, 20:17 IST
   

ಮಂಡ್ಯ: ‘ಯಾವುದೇ ಸಂದರ್ಭದಲ್ಲಿ ಬೇಕಿದ್ದರೂ ರಾಜ್ಯ ವಿಧಾನಸಭೆಗೆ ಚುನಾವಣೆ ಬರಬಹುದು; ಅದಕ್ಕಾಗಿ ನೀವು ಸನ್ನದ್ಧರಾಗಿರಿ’ ಎಂದು ಕೆ.ನಿಖಿಲ್, ಜೆಡಿಎಸ್‌ ಕಾರ್ಯಕರ್ತರಿಗೆ ಹೇಳಿದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

‘ಈಗ ರಾಜ್ಯ ಸರ್ಕಾರಕ್ಕೆ ಯಾವುದೇ ತೊಂದರೆಯಿಲ್ಲ. ಇಂದು, ನಾಳೆ ಅಥವಾ ವರ್ಷ ಕಳೆದು ಚುನಾವಣೆ ಬರಬಹುದು. ಯಾವುದೇ ಕ್ಷಣದಲ್ಲಿ ಬಂದರೂ ನಾವು ಸಿದ್ಧರಿರಬೇಕು. ಅದಕ್ಕಾಗಿ ತಯಾರಿ ಮಾಡಿಕೊಳ್ಳಬೇಕು’ ಎಂದು ಅವರು ಹೇಳಿದ್ದಾರೆ.

‘ನಾಲ್ಕು ವರ್ಷ ಕುಮಾರಣ್ಣ ಮುಖ್ಯ ಮಂತ್ರಿ ಅವಧಿ ಪೂರ್ಣಗೊಳಿಸುತ್ತಾರೆ. ಸರ್ಕಾರದಲ್ಲಿ ಏನು ನಡೆಯುತ್ತಿದೆ ಎಂಬುದರ ಬಗ್ಗೆ ನನಗೆ ಅರಿವಿದೆ. ಮಾಧ್ಯಮಗಳಲ್ಲಿ ಬರುವುದನ್ನು ನೋಡಿ ನೀವು ವಿಶ್ವಾಸ ಕಳೆದುಕೊಳ್ಳಬೇಡಿ’ ಎಂದು ಧೈರ್ಯವನ್ನೂ ನೀಡಿದ್ದಾರೆ.

ADVERTISEMENT

ಆದರೆ, ಈ ಚರ್ಚೆ ಎಲ್ಲಿ, ಯಾವಾಗ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿಲ್ಲ. ಆದರೆ, ಲೋಕಸಭೆ ಚುನಾವಣೆ ಸೋಲಿನ ಬಳಿಕ ಜಿಲ್ಲೆಯ ಜನರ ಬಳಿ ತೆರಳುತ್ತಿರುವ ನಿಖಿಲ್ ಜನರ ಕಷ್ಟಗಳಿಗೆ ಸ್ಪಂದಿಸುತ್ತಿದ್ದಾರೆ. ಜೊತೆಗೆ ಹಿರಿಯ ರಾಜಕೀಯ ಮುಖಂಡರನ್ನು ಭೇಟಿಯಾಗಿ ಮಾರ್ಗದರ್ಶನ ಪಡೆಯು ತ್ತಿದ್ದಾರೆ. ಇದೆಲ್ಲ ಮಂಡ್ಯ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ನಿಖಿಲ್ ನಡೆಸುತ್ತಿರುವ ಪೂರ್ವ ತಯಾರಿ ಎಂಬ ಮಾತುಗಳೂ ಕೇಳಿಬರುತ್ತಿವೆ.

2–3 ದಿನದಲ್ಲಿ ವಿಶ್ವನಾಥ್‌ ರಾಜೀನಾಮೆ ವಾಪಸ್‌

ಹಾಸನ: ‘ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ಎಚ್‌. ವಿಶ್ವನಾಥ ಅವರು ನೀಡಿರುವ ರಾಜೀನಾಮೆಯನ್ನು ಶೀಘ್ರವೇ ವಾಪಸ್‌ ಪಡೆಯಲಿದ್ದಾರೆ’ ಎಂದು ಸಂಸದ ಪ್ರಜ್ವಲ್‌ ರೇವಣ್ಣ ವಿಶ್ವಾಸ ವ್ಯಕ್ತಪಡಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.