ADVERTISEMENT

ಸಾರಿಗೆ ನೌಕರರ ಭವಿಷ್ಯ ನಿಧಿ ಬಾಕಿಗೆ ಅನುದಾನ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2022, 20:45 IST
Last Updated 5 ಆಗಸ್ಟ್ 2022, 20:45 IST
   

ಬೆಂಗಳೂರು: ನಾಲ್ಕು ಸಾರಿಗೆ ಸಂಸ್ಥೆಗಳ ನೌಕರರ ಭವಿಷ್ಯ ನಿಧಿ ಬಾಕಿ ಪಾವತಿ ಮತ್ತು ಇಂಧನ ವೆಚ್ಚಕ್ಕೆ ರಾಜ್ಯ ಸರ್ಕಾರ ₹1,059 ಕೋಟಿ ಬಿಡುಗಡೆ ಮಾಡಿದೆ.

‘2021ರ ಜನವರಿಯಿಂದ ಬಾಕಿ ಇರುವ ಭವಿಷ್ಯ ನಿಧಿ ಯನ್ನು ನಿಗದಿತ ಅವಧಿಯಲ್ಲಿ ಪಾವತಿಸದಿದ್ದರೆ ಗಂಭೀರ ಆಕ್ಷೇಪಗಳು ಎದುರಾಗಬಹುದು, ನಿಗಮಗಳ ಮೇಲೆ ಕಾನೂ ನಾತ್ಮಕ ಕ್ರಮಗಳು ಜರುಗಿಸಲು ಭವಿಷ್ಯ ನಿಧಿ ಕಾಯ್ದೆಯಲ್ಲಿ ಅವಕಾಶ ಇದೆ. ಆದ್ದರಿಂದ ಬಾಕಿ ಮೊತ್ತಕ್ಕೆ ₹800 ಕೋಟಿ ಪಾವತಿಸಬೇಕು’ ಎಂದು ನಾಲ್ಕು ಸಂಸ್ಥೆಗಳ ಪರವಾಗಿ ಸರ್ಕಾರಕ್ಕೆ ಕೆಎಸ್‌ಆರ್‌ಟಿಸಿ ಪ್ರಸ್ತಾವನೆ ಸಲ್ಲಿಸಿತ್ತು. ಅಲ್ಲದೇ, ಎರಡು ತಿಂಗಳ ಇಂಧನ ವೆಚ್ಚಕ್ಕೆ ₹400 ಸೇರಿಸಿ ಒಟ್ಟಾರೆ ₹1,200 ಕೋಟಿ ಬಿಡುಗಡೆ ಮಾಡುವಂತೆ ಕೋರಿತ್ತು.

ಆದರೆ, ₹1059.27 ಕೋಟಿ ಬಿಡುಗಡೆ ಮಾಡಿರುವ ಸರ್ಕಾರ, ಬಾಕಿ ₹140.72 ಕೋಟಿಯನ್ನು ಪೂರಕ ಅಂದಾಜಿನಮೂಲಕ ಬಿಎಂಟಿಸಿಗೆ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.