ADVERTISEMENT

ತ್ಯಾಗ ಮಾಡಿದ್ದು ಏನು?: ಕಾಂಗ್ರೆಸ್‌ ಮುಖಂಡ ಚಂದ್ರಶೇಖರ್‌

​ಪ್ರಜಾವಾಣಿ ವಾರ್ತೆ
Published 25 ಜೂನ್ 2021, 20:42 IST
Last Updated 25 ಜೂನ್ 2021, 20:42 IST
ಪ್ರೊ.ಬಿ.ಕೆ. ಚಂದ್ರಶೇಖರ್‌
ಪ್ರೊ.ಬಿ.ಕೆ. ಚಂದ್ರಶೇಖರ್‌   

ಬೆಂಗಳೂರು: ‘ಎರಡು ವರ್ಷದ ಹಿಂದೆ ಜೆಡಿಎಸ್‌, ಕಾಂಗ್ರೆಸ್‌ ತೊರೆದು ವಲಸಿಗರಾಗಿ ಬಂದು ಈ ಸರ್ಕಾರದಲ್ಲಿ ಶಾಸಕರು, ಮಂತ್ರಿಗಳಾದವರು ‘ತ್ಯಾಗಕ್ಕೆ ತಕ್ಕ ಬೆಲೆ ಸಿಕ್ಕಿಲ್ಲ’ ಎಂದು ವಿಲವಿಲ ಒದ್ದಾಡುತ್ತಿದ್ದಾರೆ. ಇವರು ತ್ಯಾಗ ಮಾಡಿದ್ದಾದರೂ ಏನು’ ಎಂದು ಕಾಂಗ್ರೆಸ್‌ ಮುಖಂಡ ಪ್ರೊ.ಬಿ.ಕೆ. ಚಂದ್ರಶೇಖರ್‌ ಪ್ರಶ್ನಿಸಿದ್ದಾರೆ.

‘ಒಂದು ರಾಜಕೀಯ ಅನಿಶ್ಚಿತತೆಯ ಮುಳ್ಳು ಬೇಲಿಯ ಮೇಲೆ ನಿರಂತರವಾಗಿ ಕುಳಿತು ಬಟ್ಟೆ ಹರಿದ ನಂತರ ಬಿಜೆಪಿ ಜತೆ ರಹಸ್ಯ ಒಪ್ಪಂದ ಮಾಡಿಕೊಂಡು ತ್ಯಾಗಕ್ಕೆ ಮುಂದಾದರಲ್ಲವೆ? ಒಬ್ಬ ವ್ಯಕ್ತಿ ಅಧಿಕಾರದಲ್ಲಿ ಇರಲು ಯೋಗ್ಯನೆ? ಅಲ್ಲವೆ? ಎಂಬುದನ್ನು ನಿರ್ಧರಿಸಬೇಕಾಗಿರುವುದು ಆತ ಅಲ್ಲಿಗೆ ತಲುಪಲು ದಾರಿಯಲ್ಲವೆ’
ಎಂದು ಪತ್ರಿಕಾ ಹೇಳಿಕೆಯಲ್ಲಿ ಕೇಳಿದ್ದಾರೆ.

‘ಇವರ ತ್ಯಾಗದ ಬಾಬ್ತಿಗೆ ಆಳುವ ಪಕ್ಷಕ್ಕೆ ತಗುಲಿದ ವೆಚ್ಚವನ್ನು ಹೇಳುವಂತಿಲ್ಲ. ಹೀಗೆ ಹಪಹಪಿಸುವ ರಾಜಕಾರಣಿಗಳು ತ್ಯಾಗ ಮಾಡಿರುವುದು ಏನು ಎಂಬುದು ನನ್ನಂತಹ ಸಾಮಾನ್ಯ ಜನರಿಗೆ ಅರ್ಥವಾಗದ ವಿಷಯ’ ಎಂದಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.