ADVERTISEMENT

ಕಾಂಗ್ರೆಸ್ ಸಮರ್ಪಣಾ ಸಂಕಲ್ಪ ಸಮಾವೇಶ: ಜನರನ್ನು ಕರೆದೊಯ್ಯಲು 250 ಬಿಎಂಟಿಸಿ ಬಸ್

​ಪ್ರಜಾವಾಣಿ ವಾರ್ತೆ
Published 20 ಮೇ 2025, 4:06 IST
Last Updated 20 ಮೇ 2025, 4:06 IST
   

ಬಳ್ಳಾರಿ: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷವಾದ ಹಿನ್ನೆಲೆಯಲ್ಲಿ ಹೊಸಪೇಟೆಯಲ್ಲಿ ಇಂದು ನಡೆಯುತ್ತಿರುವ 'ಸಮರ್ಪಣಾ ಸಂಕಲ್ಪ' ಸಮಾವೇಶಕ್ಕೆ ಜನರನ್ನು ಕರೆದೊಯ್ಯಲು ಬೆಂಗಳೂರಿನಿಂದ 250 ಬಿಎಂಟಿಸಿ ಬಸ್‌ಗಳು ಬಳ್ಳಾರಿಗೆ ಬಂದಿವೆ.

ಇದರ ಜತೆಗೆ ಚಿಕ್ಕಬಳ್ಳಾಪುರ, ಹಾಸನದಿಂದ ತಲಾ 50, ರಾಯಚೂರಿನಿಂದ 225 ಬಸ್‌ಗಳನ್ನು ಕರೆಸಿಕೊಳ್ಳಲಾಗಿದೆ.

ಕೆಕೆಆರ್‌ಟಿಸಿಯ ಬಳ್ಳಾರಿ ವಿಭಾಗದಲ್ಲಿ ಬಸ್ ಗಳ ಕೊರತೆ ಇದ್ದಿದ್ದರಿಂದ ರಾಜ್ಯದ ವಿವಿಧ ಕಡೆಗಳಿಂದ ಬಸ್ ಗಳನ್ನು ತರಿಸಿಕೊಳ್ಳಲಾಗಿದೆ. ಜಿಲ್ಲೆಯಿಂದ ಒಟ್ಟು 800 ಬಸ್ ಗಳನ್ನು ಸಮಾವೇಶಕ್ಕೆ ಒಪ್ಪಂದದ ಮೇರೆಗೆ ಒದಗಿಸಲಾಗಿದೆ ಎಂದು ಸಂಸ್ಥೆಯ ವಿಭಾಗೀಯ ಸಂಚಾರ ನಿಯಂತ್ರಕರು ಪ್ರಜಾವಾಣಿಗೆ ತಿಳಿಸಿದರು.

ADVERTISEMENT

ರಾಜ್ಯದ ವಿವಿಧ ಕಡೆಗಳಿಂದ ಬಳ್ಳಾರಿಗೆ ಬಂದಿರುವ ಬಸ್‌ಗಳು ಮುನ್ಸಿಪಲ್ ಕಾಲೇಜು ಮೈದಾನ, ಅಕ್ಕಪಕ್ಕದ ರಸ್ತೆಗಳಲ್ಲಿ ನಿಂತಿವೆ.

ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳಿಂದ ತಲಾ 10 ಸಾವಿರ ಜನರನ್ನು ಸಮಾವೇಶಕ್ಕೆ ಕರೆದೊಯ್ಯಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.