ADVERTISEMENT

ಮೇಜರ್ ಸಂದೀಪ್ ಪಾಠ ಕೈಬಿಟ್ಟಿದ್ದ ಬರಗೂರು ಸಮಿತಿ: ಬಿಜೆಪಿ ತಿರುಗೇಟು

​ಪ್ರಜಾವಾಣಿ ವಾರ್ತೆ
Published 7 ಜೂನ್ 2022, 19:32 IST
Last Updated 7 ಜೂನ್ 2022, 19:32 IST
ಮೇಜರ್‌ ಸಂದೀಪ್‌ ಉನ್ನಿಕೃಷ್ಣನ್‌
ಮೇಜರ್‌ ಸಂದೀಪ್‌ ಉನ್ನಿಕೃಷ್ಣನ್‌   

ಬೆಂಗಳೂರು: ಬರಗೂರು ರಾಮಚಂದ್ರಪ್ಪ ನೇತೃತ್ವದ ಈ ಹಿಂದಿನ ಪಠ್ಯ ಪುಸ್ತಕ ಪರಿಷ್ಕರಣ ಸಮಿತಿ ಪರಿಷ್ಕರಿಸಿದ ಪಠ್ಯ ಪುಸ್ತಕಗಳಲ್ಲಿ ‘ತಪ್ಪು’ಗಳನ್ನು ಎತ್ತಿ ತೋರಿಸಲು ಇದೀಗ ಬಿಜೆಪಿ ಪರ ಗುಂಪು ಮುಂದಾಗಿದೆ!

8ನೇ ತರಗತಿಯ ಕನ್ನಡ ಭಾಷಾ ಪಠ್ಯ ಪುಸ್ತಕದಲ್ಲಿದ್ದ, 2008ರಲ್ಲಿ ಮುಂಬೈ ದಾಳಿ ವೇಳೆ ಉಗ್ರರ ಗುಂಡಿಗೆ ಬಲಿಯಾಗಿದ್ದ ಮೇಜರ್‌ ಸಂದೀಪ್‌ ಉನ್ನಿಕೃಷ್ಣನ್‌ ಕುರಿತ ಪಾಠವನ್ನು ಬರಗೂರು ಸಮಿತಿ ಕೈಬಿಟ್ಟಿತ್ತು.

‘2008ರಲ್ಲಿ ನಡೆದ ಉಗ್ರದ ದಾಳಿ ಸಂದರ್ಭದಲ್ಲಿ ರಾಷ್ಟ್ರೀಯ ಭದ್ರತಾ ಪಡೆ (ಎನ್‌ಎಸ್‌ಜಿ) ನಡೆಸಿದ ಕಾರ್ಯಾಚರಣೆ ಕುರಿತು ಶಿಕ್ಷಕಿ ಮತ್ತು ಕೆಲವು ವಿದ್ಯಾರ್ಥಿಗಳ ನಡುವಿನ ಸಂಭಾಷಣೆ ಹೊಂದಿದ್ದ ‘ಕರಾಳ ರಾತ್ರಿ’ ಎಂಬ ಪಠ್ಯವಿತ್ತು. ಮೇಜರ್‌ ಸಂದೀಪ್‌ ಉನ್ನಿಕೃಷ್ಣನ್‌ ಹೋರಾಟದ ಮಾಹಿತಿ ಈ ಪಾಠದಲ್ಲಿ ಮಾಹಿತಿ ಇತ್ತು. ಅದನ್ನು ತೆಗೆದು ಹಾಕಲಾಗಿದೆ’ ಎಂದು ಸಾಮಾಜಿಕ ಜಾಲ ತಾಣದಲ್ಲಿ ಬಿಜೆಪಿ ಬೆಂಬಲಿಗರು ದೂರಿದ್ದಾರೆ.

ADVERTISEMENT

‘ಕರಾಳ ರಾತ್ರಿ’ ಪಾಠದ ಬದಲು ‘ಬ್ಲಡ್‌ ಗ್ರೂಪ್‌’ ಶೀರ್ಷಿಕೆಯ ಪಾಠವನ್ನು ಬರಗೂರು ಸಮಿತಿ ಅಳವಡಿಸಿತ್ತು. ಈ ಹಿಂದಿನ ಸಮಿತಿ ಕನ್ನಡ ದ್ವಿತೀಯ ಭಾಷೆಯ ಪಠ್ಯ ಪುಸ್ತಕದಲ್ಲಿ ‘ಬ್ಲಡ್‌ ಗ್ರೂಪ್‌’ ಎಂಬ ಇಂಗ್ಲಿಷ್‌ ಪದವನ್ನು ಬಳಸಿತ್ತು’ ಎಂದು ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.