
ಪ್ರಜಾವಾಣಿ ವಾರ್ತೆ
ಬೆಂಗಳೂರು: ವಚನಜ್ಯೋತಿ ಬಳಗದ ಸಂಸ್ಥಾಪಕ ಪಂಡಿತ ಕೆ.ಪಿ. ಶಿವಲಿಂಗಯ್ಯನವರ ನೆನಪಿನಲ್ಲಿ ನೀಡುವ ‘ಶಿವಲಿಂಗ ಪ್ರಶಸ್ತಿ’ಗೆ ಶಿರಸಿಯ ಹಿಂದೂಸ್ಥಾನಿ ಗಾಯಕಿ ಸರಸ್ವತಿ ಹೆಗಡೆ ಅವರು ಆಯ್ಕೆಯಾಗಿದ್ದಾರೆ.
ಕನ್ನಡ ಭಾಷೆ, ಸಂಸ್ಕೃತಿ, ವಿಶೇಷವಾಗಿ ವಚನ ಚಳವಳಿಯ ಪ್ರಸರಣದಲ್ಲಿ ತೊಡಗಿದವರನ್ನು ಗುರುತಿಸಿ ಪ್ರತಿ ವರ್ಷ ಪ್ರಶಸ್ತಿ ನೀಡಲಾಗುತ್ತಿದೆ. ಸರಸ್ವತಿ ಹೆಗಡೆ ಅವರು ಪಂಡಿತ ಪರಮೇಶ್ವರ ಹೆಗಡೆಯವರ ಶಿಷ್ಯರಾಗಿದ್ದು, ಆಕಾಶವಾಣಿಯಲ್ಲಿ ಬಿ ಗ್ರೇಡ್ ಕಲಾವಿದೆಯಾಗಿದ್ದಾರೆ.
ಮಲ್ಲತ್ತಹಳ್ಳಿಯಲ್ಲಿರುವ ಇಂದಿರಾಗಾಂಧಿ ಕಲಾಕೇಂದ್ರದಲ್ಲಿ ಫೆ.22ರಂದು ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಪ್ರಶಸ್ತಿಯು ₹10 ಸಾವಿರ ನಗದು, ಫಲಕ, ಫಲತಾಂಬೂಲವನ್ನು ಒಳಗೊಂಡಿದೆ ಎಂದು ವಚನಜ್ಯೊತಿ ಬಳಗದ ಅಧ್ಯಕ್ಷ ಪಿನಾಕಪಾಣಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.