
ಬಾಗಲಕೋಟೆ: ‘ಮುಖ್ಯಮಂತ್ರಿ ಬದಲಾವಣೆ ಕುರಿತು ರಾಜ್ಯದಲ್ಲಿರುವ ಗೊಂದಲವನ್ನು ಬಗೆಹರಿಸಲು ನೀವು ಮಧ್ಯಪ್ರವೇಶಿಸಬೇಕು. ಇಲ್ಲದಿದ್ದರೆ ಪಕ್ಷಕ್ಕೆ ತೊಂದರೆಯಾಗುತ್ತದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮನವಿ ಮಾಡಿದ್ದೇವೆ’ ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಗೊಂದಲ ಮುಂದುವರೆದರೆ ಕಾರ್ಯಕರ್ತರು, ಸರ್ಕಾರಕ್ಕೆ ತೊಂದರೆ ಎಂದು ತಿಳಿಸಿದ್ದೇವೆ. ಆದಷ್ಟು ಬೇಗ ಮಾಡುತ್ತೇವೆ ಎಂದಿದ್ದಾರೆ‘ ಎಂದು ತಿಳಿಸಿದರು.
‘ರಾಜ್ಯ ಬಜೆಟ್ ಬಳಿಕ ಮಹತ್ತರ ಬದಲಾವಣೆಯಾಗುವ ಬಗ್ಗೆ ಗೊತ್ತಿಲ್ಲ. ಗೊಂದಲ ನಿಲ್ಲಲಿ ಎನ್ನುವುದಷ್ಟೇ ನಮ್ಮ ವಿಚಾರ. ಎರಡೂವರೆ ವರ್ಷ ಎಂಬುದನ್ನು ನಾವು ಕೇಳಿಲ್ಲ. ಅವರೇ ಮುಖ್ಯ ಮಂತ್ರಿಯಾಗಿ ಮುಂದುವರೆಯುತ್ತಾರೆ. ಉಳಿದದ್ದು ಹೈಕಮಾಂಡ್‌ಗೆ ಬಿಟ್ಟದ್ದು ’ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.