ADVERTISEMENT

ಮೆಣಸಗಿ: ಪರಿಶಿಷ್ಟ ವ್ಯಕ್ತಿಗಳಿಗೆ ಸಗಣಿ ತಿನ್ನಿಸಲು ಪ್ರಯತ್ನ

​ಪ್ರಜಾವಾಣಿ ವಾರ್ತೆ
Published 22 ಜೂನ್ 2022, 18:47 IST
Last Updated 22 ಜೂನ್ 2022, 18:47 IST

ರೋಣ(ಗದಗ ಜಿಲ್ಲೆ): ತಾಲ್ಲೂಕಿನ ಮೆಣಸಗಿ ಗ್ರಾಮದಲ್ಲಿ ಮೂರು ಮಂದಿ ಪರಿಶಿಷ್ಟ ಜಾತಿ ವ್ಯಕ್ತಿಗಳ ವಿರುದ್ಧ ಏಳು ಮಂದಿ ಅಮಾನವೀಯವಾಗಿ ನಡೆದುಕೊಂಡ ಘಟನೆ ಕೆಲ ದಿನಗಳ ಹಿಂದೆ ನಡೆದಿದೆ.

ಗ್ರಾಮದ ಗುತ್ತಿಗೆದಾರ ಪುಂಡಲೀಕಪ್ಪ ಬಸಪ್ಪ ಮಾದರ ಅವರು ಸ್ನೇಹಿತರಾದ ಹನಮಂತ ಹಾಗೂ ಗಣೇಶ ದೇವರಮನಿ ಅವರ ಜತೆಗೆ ಬಸ್ ನಿಲ್ದಾಣದಲ್ಲಿ ನಿಂತಿದ್ದರು. ಆಗ ಏಕಾಏಕಿ ಬಂದ ಎಂಟು ಜನರ ಗುಂಪೊಂದು ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದೆ.

ಈ ವೇಳೆ ರಾಜು ಬಾದಾಮಿ ಎಂಬಾತ ಸಗಣಿ ಹಿಡಿದುಕೊಂಡು ಬಂದು ಪುಂಡಲೀಕಪ್ಪ ಅವರ ಬಾಯಿಗೆ ಇಡಲು ಪ್ರಯತ್ನಿಸಿದ್ದಾನೆ. ಅಲ್ಲದೇ, ಗುಂಪಿನಲ್ಲಿದ್ದ ಇತರರು ಮೂವರ ಅಂಗಿ ಬಿಚ್ಚಿಸಿ ಅವಮಾನ ಮಾಡಿದ್ದಾರೆ ಎನ್ನಲಾಗಿದೆ. ಜತೆಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ADVERTISEMENT

ರೋಣ ಪೊಲೀಸ್ ಠಾಣೆಯಲ್ಲಿ ಎಂಟು ಮಂದಿ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.