
ಮಧು ಬಂಗಾರಪ್ಪ
ಬೆಳಗಾವಿ: ರಾಜ್ಯದಲ್ಲಿನ 1,689 ಸರ್ಕಾರಿ ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳ ಕಟ್ಟಡಗಳು ಆಯಾ ಶಾಲೆ–ಕಾಲೇಜುಗಳ ಹೆಸರಿಗೆ ಖಾತೆಯೇ ಆಗಿಲ್ಲ.
ವಿಧಾನಪರಿಷತ್‌ನಲ್ಲಿ ಜೆಡಿಎಸ್‌ನ ಕೆ.ವಿವೇಕಾನಂದ ಅವರ ಪ್ರಶ್ನೆಗೆ ಉತ್ತರ ನೀಡಿರುವ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು, 4,872 ಪ್ರೌಢಶಾಲೆಗಳಲ್ಲಿ 3,437 ಕಟ್ಟಡಗಳು ಖಾತೆಯಾಗಿವೆ. 1,435 ಆಗಬೇಕಿದೆ. 1,319 ಪದವಿಪೂರ್ವ ಕಾಲೇಜುಗಳಲ್ಲಿ 1,055 ಖಾತೆಯಾಗಿವೆ. 264 ಖಾತೆ ಆಗಿಲ್ಲ ಎಂದು ಮಾಹಿತಿ ನೀಡಿದ್ದಾರೆ.
ಸರ್ಕಾರ ಶಾಲಾ ಆಸ್ತಿಗಳ ಸಂರಕ್ಷಣೆಗಾಗಿ ಕಂದಾಯ, ಗ್ರಾಮೀಣಾಭಿವೃದ್ಧಿ, ಪೌರಾಡಳಿತ ಇಲಾಖೆಗಳ ಸಹಯೋಗದಲ್ಲಿ 2022–23ನೇ ಸಾಲಿನಿಂದ ಪ್ರತಿ ವರ್ಷ ಶಾಲಾ–ಕಾಲೇಜು ಆಸ್ತಿ ಸಂರಕ್ಷಣಾ ಆಂದೋಲನ ನಡೆಸಲಾಗುತ್ತಿದೆ. ಉಳಿದ ಎಲ್ಲ ಆಸ್ತಿಯನ್ನೂ ಹಂತ ಹಂತವಾಗಿ ಖಾತೆ ಮಾಡಲು ಕ್ರಮವಹಿಸಲಾಗುತ್ತದೆ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.