ADVERTISEMENT

ಕರಾವಳಿಯಲ್ಲಿ ಕಡಲ್ಕೊರೆತ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 7 ಜುಲೈ 2022, 19:32 IST
Last Updated 7 ಜುಲೈ 2022, 19:32 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಮಳೆ ಮುಂದುವರೆದಿದೆ. ಕಡಲ್ಕೊರೆತ ಹೆಚ್ಚಳವಾಗಿದ್ದು, ಬೈಂದೂರು ತಾಲ್ಲೂಕಿನ ಮರವಂತೆಯಲ್ಲಿ ಸ್ಥಳೀಯರೇ ಕಡ ಲ್ಕೊರೆತ ತಡೆಗೆ ಮರಳಿನ ಚೀಲಗಳನ್ನು ಹಾಕಿದ್ದಾರೆ.

ಮಂಗಳೂರು ತಾಲ್ಲೂಕಿನ ಅದ್ಯಪಾಡಿ–ಕೆಂಜಾರು ರಸ್ತೆ ಕುಸಿದು ಸಂಚಾರ ಕಡಿತಗೊಂಡಿದೆ. ಬೆಳ್ತಂ ಗಡಿಯ ವೇಣೂರು ಸುದೆರ್ದುವಿನಲ್ಲಿ ಹಟ್ಟಿಯ ಛಾವಣಿ ಬಿದ್ದು ದನವೊಂದು ಸತ್ತಿದೆ. ಕಾಸರಗೋಡಿನ ಅಗ್ನಿಶಾಮಕದಳ ಕಚೇರಿ ಮೇಲೆ ಮರ ಬಿದ್ದು 3 ವಾಹನ ಜಖಂಗೊಂಡಿವೆ.

ಸುಬ್ರಹ್ಮಣ್ಯ ಬಳಿ ಬಂಡೆಯೊಂದು ಉರುಳಿ ಹಳಿ ಮೇಲೆ ಬಿದ್ದಿತ್ತು. ಇದ ರಿಂದ ಕೆಲ ಗಂಟೆ ರೈಲು ಸಂಚಾರ ಸ್ಥಗಿತಗೊಂಡಿತ್ತು.

ADVERTISEMENT

ಚಿಕ್ಕಮಗಳೂರು ಜಿಲ್ಲೆಯ ಚಿಕ್ಕಮಗ ಳೂರು, ಮೂಡಿಗೆರೆ, ಕೊಪ್ಪ, ಎನ್‌.ಆರ್‌.ಪುರ, ಕಳಸ, ಶೃಂಗೇರಿ ಭಾಗದಲ್ಲಿ ಮಳೆಯಾಗಿದೆ. ‌ಉಡುಪಿ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಭಾರಿ ಮಳೆಗೆ ಬೈಂದೂರು ತಾಲ್ಲೂಕಿನಲ್ಲಿ ನೆರೆ ಬಂದಿದೆ. ಸೌಪರ್ಣಿಕ ನದಿ ತುಂಬಿ ಹರಿದು ನಾವುಂದ ಗ್ರಾಮ ಮುಳು ಗಡೆಯಾಗಿದೆ.

ಜನ ಹಾಗೂ ಜಾನುವಾರು ಸಂಕಷ್ಟಕ್ಕೆ ಸಿಲುಕಿದ್ದು, ಜಿಲ್ಲಾಡಳಿತ ಬೋಟ್‌ ಹಾಗೂ ದೋಣಿಗಳನ್ನು ಬಳಸಿಕೊಂಡು ಸಂತ್ರಸ್ತರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುತ್ತಿದೆ. ಬಂಟ್ವಾಡಿಯಲ್ಲಿ ಸೇತುವೆ ಹಾಗೂ ಕಿಂಡಿ ಅಣೆಕಟ್ಟು ಕಾಮಗಾರಿ ನಡೆಯುತ್ತಿರುವುದರಿಂದ ನೆರೆ ನೀರು ಹರಿದುಹೋಗಲು ಅಡ್ಡಿಯಾಗಿದ್ದು ನೆರೆಯ ಪ್ರಮಾಣ ಹೆಚ್ಚಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.

ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಎಡಬಿಡದೆ ಸುರಿಯುತ್ತಿರುವ ಮಳೆ ಯಿಂದ ಸಾಲ್ಬುಡ, ಕುದ್ರು ಗ್ರಾಮಗಳಿಗೆ ನೀರು ನುಗ್ಗಿದ್ದು, ಭತ್ತದ ಕೃಷಿಗೆ ಹಾನಿಯಾಗಿದೆ. ಸ್ಥಳೀಯರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣಾ ಕಾರ್ಯಕ್ಕೆ ಕೈಜೋಡಿಸಿದ್ದಾರೆ.

ಶಿವಮೊಗ್ಗ: ಜಿಲ್ಲೆಯಾದ್ಯಂತ ಗುರು ವಾರವೂ ಮಳೆ ಮುಂದುವರಿದಿದ್ದು, ತುಂಗಾ, ಭದ್ರಾ, ಶರಾವತಿ ನದಿಗಳು, ತೊರೆ, ಹಳ್ಳ, ಕೊಳ್ಳಗಳು ಉಕ್ಕಿ ಹರಿಯುತ್ತಿವೆ. ದಾವಣಗೆರೆ ನಗರವೂ ಸೇರಿ ಜಿಲ್ಲೆಯ ವಿವಿಧೆಡೆ ಸಾಧಾರಣ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.