ADVERTISEMENT

ಪಿಎಫ್‌ಐ ನಿಷೇಧ: ‘ಸೆಪ್ಟೆಂಬರ್ ಕ್ರಾಂತಿ’ ಎಂದು ಬಣ್ಣಿಸಿದ ಅಲೋಕ್‌ ಕುಮಾರ್

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2022, 16:32 IST
Last Updated 28 ಸೆಪ್ಟೆಂಬರ್ 2022, 16:32 IST
ಅಲೋಕ್‌ಕುಮಾರ್
ಅಲೋಕ್‌ಕುಮಾರ್   

ಬೆಂಗಳೂರು: ಪಿಎಫ್‌ಐ ಸಂಘಟನೆ ನಿಷೇಧವನ್ನು ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್‌ ಕುಮಾರ್‌ ಅವರು ‘ಸೆಪ್ಟೆಂಬರ್ ಕ್ರಾಂತಿ’ ಎಂದು ಬಣ್ಣಿಸಿ ಟ್ವೀಟ್‌ ಮಾಡಿದ್ದಾರೆ.

’2001ರ ಸೆ.26ರಂದು ಸಿಮಿ ಸಂಘಟನೆ ನಿಷೇಧಿಸಲಾಗಿತ್ತು. 2022ರ ಸೆ.28ರಂದು ಪಿಎಫ್‌ಐ ಸಂಘಟನೆ ನಿಷೇಧಿಸಲಾಗಿದೆ. ಇದು ಸೆಪ್ಟೆಂಬರ್ ಕ್ರಾಂತಿ. ಜನಸಾಮಾನ್ಯರ ರಕ್ಷಣೆಗೆ ನಾವು ಬದ್ಧರಿದ್ದೇವೆ. ಕಾನೂನುಬಾಹಿರ ಚಟುವಟಿಕೆ ನಾವು ವಿರುದ್ಧ‘ ಎಂದು ಟ್ವೀಟ್‌ ಮಾಡಿದ್ದಾರೆ.

ಜತೆಗೆ, ‘ಪರಿತ್ರಾಣಾಯ ಸಾಧೂನಾಂ ವಿನಾಶಾಯಚ ದುಷ್ಕೃತಾಮ್‌’ ಎಂದೂ ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.