ADVERTISEMENT

ರಮ್ಯಾ ಶೆಟ್ಟಿ ದಡ್ಡಿ ಅಲ್ಲ: ಬಾರ್ಕೂರು ಶ್ರೀ

ಮೂರು ಮಕ್ಕಳಿಗೆ ಜನ್ಮ ನೀಡಲು ಕರೆ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2018, 19:30 IST
Last Updated 11 ಆಗಸ್ಟ್ 2018, 19:30 IST
ಬಾರ್ಕೂರು ಮಹಾಸಂಸ್ಥಾನದ ಸಂತೋಷ ಭಾರತಿ ಗುರೂಜಿ
ಬಾರ್ಕೂರು ಮಹಾಸಂಸ್ಥಾನದ ಸಂತೋಷ ಭಾರತಿ ಗುರೂಜಿ   

ಅಂಕೋಲಾ: ‘ಶಿರೂರು ಶ್ರೀಗಳ ಸಾವು ಪ್ರಕರಣದಲ್ಲಿ ರಮ್ಯಾ ಶೆಟ್ಟಿಯನ್ನು ಅಪರಾಧಿ ಎಂಬಂತೆ ಬಿಂಬಿಸಲಾಗಿದೆ; ಆದರೆ, ಹೆಣ್ಣಾಗಿ, ಚಿನ್ನದ ಮೊಟ್ಟೆ ಇಡುವ ಕೋಳಿಯನ್ನು ಕೊಯ್ದು ಹಾಕುವಷ್ಟು ದಡ್ಡಿ ಅವಳಲ್ಲ!’ ಎಂದು ಬಾರ್ಕೂರು ಮಹಾಸಂಸ್ಥಾನದ ಪೀಠಾಧಿಪತಿ ಸಂತೋಷ ಭಾರತಿ ಗುರೂಜಿ ಹೇಳಿದರು.

ತಾಲ್ಲೂಕಿನ ಬಾಸ್ಗೋಡದಲ್ಲಿ ‘ಪಹರೆ ವೇದಿಕೆ’ ಹಮ್ಮಿಕೊಂಡಿದ್ದ ‘ಕೃಷಿ ಹಬ್ಬ’ದಲ್ಲಿ ಪಾಲ್ಗೊಳ್ಳಲು ಬಂದಿದ್ದ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.

‘ಶ್ರೀಗಳು ವಿಧಿವಶರಾದ ಬಳಿಕವೂ ಅವರ ಮೇಲಿನ ಹಗೆತನ ಕಡಿಮೆಯಾಗಿಲ್ಲ. ಹೀಗಾಗಿ, ಶ್ರೀಗಳ ಸಾವಿಗೆ ಬೇರೆಯೇ ಕಾರಣವಿದೆ ಎನ್ನುವುದು ಸ್ಪಷ್ಟ’ ಎಂದರು.

ADVERTISEMENT

ಶಿರೂರು ಶ್ರೀಗಳು ಸ್ವಾಮೀಜಿಯೇ ಅಲ್ಲ ಎನ್ನುವ ಪೇಜಾವರ ಶ್ರೀಗಳ ಹೇಳಿಕೆಯನ್ನು ತಾವು ಒಪ್ಪುವುದಿಲ್ಲ ಎಂದ ಅವರು, ‘ಶ್ರೀಗಳು ಬದುಕಿದ್ದಾಗಲೇ ಇಂಥ ಆರೋಪಗಳನ್ನು ಯಾಕೆ ಮಾಡಲಿಲ್ಲ?’ ಎಂದು ಪ್ರಶ್ನಿಸಿದರು.

‘ಶಿರೂರು ಮಠದ ಲಕ್ಷ್ಮೀವರತೀರ್ಥರು ಮದ್ಯವ್ಯಸನಿಯಾಗಿದ್ದರು; ಮಠದಲ್ಲಿ ₹ 4.5 ಲಕ್ಷ ಮೌಲ್ಯದ ಮದ್ಯ ಪತ್ತೆಯಾಗಿದೆ ಎಂಬ ಆರೋಪಗಳು ಅಸಂಬದ್ಧ. ಒಬ್ಬ ವ್ಯಕ್ತಿ ಇಷ್ಟು ಮೌಲ್ಯದ ಮದ್ಯ ಕುಡಿಯಲು ಸಾಧ್ಯವೇ?’ ಎಂದೂ ಕೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.