ADVERTISEMENT

ಮರಳಿನಲ್ಲಿ ಮೂಡಿದ ಸಿದ್ದಗಂಗಾ ಶ್ರೀ ಶಿಲ್ಪ

​ಪ್ರಜಾವಾಣಿ ವಾರ್ತೆ
Published 23 ಜನವರಿ 2019, 10:31 IST
Last Updated 23 ಜನವರಿ 2019, 10:31 IST
 ಶಿವೈಕ್ಯರಾದ ಸಿದ್ಧಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿ ಅವರಿಗೆ ಮರಣೋತ್ತರ ಭಾರತರತ್ನ ಪ್ರಶಸ್ತಿ ನೀಡುವಂತೆ ಒತ್ತಾಯಿಸಿ ಮರಳು ಶಿಲ್ಪ ಕಲಾವಿದರ ತಂಡವು ಮಂಗಳವಾರ ಮಲ್ಪೆ ಕಡಲ ತೀರದಲ್ಲಿ ರಚಿಸಿದ ಸಿದ್ಧಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿ ಅವರ ಆಕರ್ಷಕ ಮರಳು ಶಿಲ್ಪ. ಪ್ರಜಾವಾಣಿ ಚಿತ್ರ/ ಉಮೇಶ್‌ ಮಾರ್ಪಳ್ಳಿ

ಉಡುಪಿ: ಶಿವೈಕ್ಯರಾದ ಸಿದ್ಧಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿ ಅವರಿಗೆ ಮರಣೋತ್ತರ ಭಾರತರತ್ನ ಪ್ರಶಸ್ತಿ ನೀಡುವಂತೆ ಒತ್ತಾಯಿಸಿ ಮರಳು ಶಿಲ್ಪ ಕಲಾವಿದರ ತಂಡವು ಮಂಗಳವಾರ ಮಲ್ಪೆ ಕಡಲ ತೀರದಲ್ಲಿ ಶ್ರೀಗಳ ಬೃಹದಾಕಾರದ ಮರಳು ಶಿಲ್ಪವನ್ನು ರಚಿಸಿತು.

ಕರ್ನಾಟಕ ಲಲಿತಾ ಅಕಾಡೆಮಿ ಸದಸ್ಯ ರಾಘವೇಂದ್ರ ಕೆ. ಅಮೀನ್, ಕಲಾವಿದರಾದ ಮಹೇಶ್ ಚೇಂಡ್ಕಳ, ಪಿ. ಸುರೇಶ್‌ ಅವರು ಮರಳ ಶಿಲ್ಪವನ್ನು ಬೆಳಗ್ಗೆ 11ಗಂಟೆಯಿಂದ ಸಂಜೆ 4ಗಂಟೆಗಳ ಅವಧಿಯಲ್ಲಿ ನಿರ್ಮಿಸಿದರು. ಇದರಲ್ಲಿ ಸ್ವಾಮೀಜಿಯ ಭಾವಚಿತ್ರ, ಭಾರತರತ್ನ ಪ್ರಶಸ್ತಿ ಹಾಗೂ ಅಕ್ಷರ ದಾಸೋಹವನ್ನು ಬಿಂಬಿಸುವ ಪುಸ್ತಕವನ್ನು ಆಕರ್ಷಕವಾಗಿ ಬಿಡಿಸಲಾಗಿದೆ.

ಇವನ್ನೂ ಓದಿ...

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.