ADVERTISEMENT

ನಿಮ್ಮ ತಟ್ಟೆಯಲ್ಲಿ ಸತ್ತುಬಿದ್ದ ಕತ್ತೆ ತೆಗೆಯಿರಿ: ಬಿಜೆಪಿ ನಾಯಕರಿಗೆ ತಂಗಡಗಿ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2025, 8:17 IST
Last Updated 8 ಡಿಸೆಂಬರ್ 2025, 8:17 IST
<div class="paragraphs"><p>ಶಿವರಾಜ ತಂಗಡಗಿ</p></div>

ಶಿವರಾಜ ತಂಗಡಗಿ

   

ಬೆಳಗಾವಿ: 'ಬಿಜೆಪಿಯವರ ತಟ್ಟೆಯಲ್ಲಿ ಕತ್ತೆ ಸತ್ತುಬಿದ್ದಿದೆ. ಅದನ್ನು ಸ್ವಚ್ಛ ಮಾಡಿಕೊಳ್ಳುವುದನ್ನು ಬಿಟ್ಟು ಮತ್ತೊಬ್ಬರ ತಟ್ಟೆಯಲ್ಲಿ‌ ನೊಣ ಹುಡುಕುತ್ತಿದ್ದಾರೆ' ಎಂದು ಸಚಿವ ಶಿವರಾಜ್ ತಂಗಡಗಿ ತಿರುಗೇಟು ನೀಡಿದರು.

ಸಿ.ಎಂ ಕುರ್ಚಿಗೆ ಸಿದ್ದರಾಮಯ್ಯ, ಶಿವಕುಮಾರ್ ಕಸರತ್ತು ನಡೆಸಿದ್ದಾರೆ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ನಗರದಲ್ಲಿ ಸೋಮವಾರ ಪ್ರತಿಕ್ರಿಯಿಸಿದ ಅವರು, 'ಅಧಿವೇಶನ ಆರಂಭವಾಗಿದೆ. ಉತ್ತರ ಕರ್ನಾಟಕದ ಬಗ್ಗೆ ಚರ್ಚೆ ಮಾಡಬೇಕು ಎಂದು ಎಲ್ಲರ ಒತ್ತಾಯ ಇದೆ. ಮೊದಲು ಬಿಜೆಪಿಯವರು ಸರಿಯಾಗಿ ಸದನದಲ್ಲಿ ಭಾಗವಹಿಸಲಿ. ಅಲ್ಲಿ ಸಮಸ್ಯೆ ಚರ್ಚೆ ಮಾಡಲಿ. ಅದನ್ನು ಬಿಟ್ಟು ಉಳಿದೆಲ್ಲ ಮಾತನಾಡುತ್ತಿದ್ದಾರೆ. ತಮ್ಮ ಮನೆಯೇ ಒಡೆದು ನೂರು ಬಾಗಿಲವಾಗಿದೆ' ಎಂದರು.

ADVERTISEMENT

'ನಮ್ಮ ಸರ್ಕಾರ ಉತ್ತರ ಕರ್ನಾಟಕಕ್ಕೆ ಎಲ್ಲ ರೀತಿಯ ಸಹಕಾರ ಮಾಡಿದ ಉದಾಹರಣೆ ನಮ್ಮ ಕಣ್ಣೆದುರು ಇದೆ. ಈ ವಿಚಾರದಲ್ಲಿ ಬಿಜೆಪಿ‌ಯವರಿಗೆ ನಮ್ಮ ಬಗ್ಗೆ ಮಾತಾಡಲು ನೈತಿಕ ಹಕ್ಕಿಲ್ಲ. ಅದರ ಅವಶ್ಯಕತೆ ಕೂಡ ಇಲ್ಲ. ಆರೋಪಕ್ಕೆ ಬೇರೆ ಏನು‌ ಇಲ್ಲ ಎಂಬ ಕಾರಣಕ್ಕೆ ಉತ್ತರ ಕರ್ನಾಟಕ ವಿಷಯ, ಉಪಾಹಾರದ ವಿಷಯ ತೆಗೆಯುತ್ತಿದ್ದಾರೆ‌. ನಮಗೆ ಏನು ಇಷ್ಟವೋ ಅದನ್ನು ನಾವು ತಿನ್ನುತ್ತೇವೆ. ಆಡಿಕೊಳ್ಳಲು ಇವರ್ಯಾರು?' ಎಂದೂ ಪ್ರಶ್ನಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.