ADVERTISEMENT

ಸಾರಿಗೆ ಹಬ್‌ಗೆ 45 ಎಕರೆ: ಸಿ.ಎಂ.ಗೆ ಶೋಭಾ ಪತ್ರ

​ಪ್ರಜಾವಾಣಿ ವಾರ್ತೆ
Published 15 ಜುಲೈ 2025, 15:15 IST
Last Updated 15 ಜುಲೈ 2025, 15:15 IST
   

ಬೆಂಗಳೂರು: ವಿಶ್ವದರ್ಜೆಯ ಬಹುಮಾದರಿ ಸಾರಿಗೆ ಹಬ್‌ ಸ್ಥಾಪಿಸಲು ಹೆಬ್ಬಾಳದ ಬಳಿ ಕೇಳಿದ್ದ 45 ಎಕರೆ ಬದಲು, 9 ಎಕರೆ ಜಾಗ ಮಂಜೂರು ಮಾಡಿರುವ ನಿರ್ಧಾರವನ್ನು ಮರು ಪರಿಶೀಲಿಸುವಂತೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ. 

ಬೆಂಗಳೂರಿನ ಸಂಚಾರ ದಟ್ಟಣೆ, ಭವಿಷ್ಯದ ಸುಗಮ ಸಂಚಾರದ ವ್ಯವಸ್ಥೆಗೆ ಬಹು ಮಾದರಿ ಸಾರಿಗೆ ಹಬ್‌ ನಿರ್ಮಿಸಲು  ಬೆಂಗಳೂರು ಮೆಟ್ರೊ ರೈಲು ನಿಗಮಕ್ಕೆ 45 ಎಕರೆ ಜಾಗ ಬೇಕಿದೆ. ಅಗತ್ಯವಿರುವ ಪೂರ್ಣ ಭೂಮಿಯನ್ನು ನಿರಾಕರಿಸುವುದರಿಂದ ಮೂಲಸೌಕರ್ಯ ಯೋಜನೆ ಹಳಿತಪ್ಪುವ ಅಪಾಯವಿದೆ ಎಂದಿದ್ದಾರೆ.

ಸಾರಿಗೆ ಹಬ್‌ ಸ್ಥಗಿತವಾದರೆ ಸಂಚಾರ ದಟ್ಟಣೆಗೆ ಜನರು ಪರಿತಪಿಸಬೇಕಾಗುತ್ತದೆ. ಬೆಂಗಳೂರಿನ ಬೆಳವಣಿಗೆಯನ್ನು ಕುಂಠಿತಗೊಳಿಸುವ ಅಪಾಯವಿದೆ. ಸ್ಥಾಪಿತ ಲಾಬಿಗಳ ಒತ್ತಡಕ್ಕಿಂತ ಸಾರ್ವಜನಿಕ ಹಿತಾಸಕ್ತಿಗೆ ರಾಜ್ಯ ಸರ್ಕಾರ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.