ತುಮಕೂರು: ಸಿದ್ದಗಂಗಾಮಠದ ಅಂದಾಜು 10 ಸಾವಿರ ವಿದ್ಯಾರ್ಥಿಗಳು ಹಾಗೂ ಭಕ್ತರಿಗೆ ಜನವರಿ 29 ರಂದು ಬೆಂಗಳೂರಿನ ಅಖಿಲ ಕರ್ನಾಟಕ ಸವಿತಾ ಸಮಾಜ ಯುವಕರ ಸಂಘವು ಉಚಿತ ಸಾಮೂಹಿಕ ಕೇಶ ಮುಂಡನ ಮಾಡಲಿದೆ.
ಇಡೀ ಭಾರತದಲ್ಲಿಯೇ ಈ ಉಚಿತ ಕೇಶ ಮುಂಡನ ಸೇವೆ ಪ್ರಪ್ರಥಮವಾದುದು. ಈ ಸೇವೆ ಮಾಡಲು ಅವಕಾಶ ಕೊಡಬೇಕು ಎಂದು ಸಂಘದ ಅಧ್ಯಕ್ಷ ವಿ.ಲಕ್ಷೀಪ್ರಸನ್ನ ಅವರು ಮಠದ ಅಧ್ಯಕ್ಷರಾದ ಸಿದ್ಧಲಿಂಗಸ್ವಾಮೀಜಿ ಅವರಿಗೆ ಪತ್ರ ಸಲ್ಲಿಸಿ ಮನವಿ ಮಾಡಿದ್ದರು.
ಸಂಘದ ಈ ಉಚಿತ ಸೇವಾ ಕಾರ್ಯಕ್ಕೆ ಸ್ವಾಮೀಜಿ ಒಪ್ಪಗೆ ಸೂಚಿಸಿದ್ದಾರೆ.
ಇವನ್ನೂ ಓದಿ...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.