ADVERTISEMENT

ಸಿದ್ಧಗಂಗಾ ಮಠ: ಶಿವಕುಮಾರ ಶ್ರೀ ಬೆಳ್ಳಿ ಪುತ್ಥಳಿ ಪ್ರತಿಷ್ಠಾಪನೆ

​ಪ್ರಜಾವಾಣಿ ವಾರ್ತೆ
Published 21 ಜನವರಿ 2020, 20:05 IST
Last Updated 21 ಜನವರಿ 2020, 20:05 IST
ಶಿವಕುಮಾರ ಸ್ವಾಮೀಜಿ ಗದ್ದುಗೆಯಲ್ಲಿ ಬೆಳ್ಳಿ ಪುತ್ಥಳಿ ಪ್ರತಿಷ್ಠಾಪನೆ ವೇಳೆ ಸಿದ್ಧಲಿಂಗ ಸ್ವಾಮೀಜಿ ನೇತೃತ್ವದಲ್ಲಿ ನಾನಾ ಮಠಾಧೀಶರು ಪೂಜಾ ಕೈಂಕರ್ಯ ಕೈಗೊಂಡರು.
ಶಿವಕುಮಾರ ಸ್ವಾಮೀಜಿ ಗದ್ದುಗೆಯಲ್ಲಿ ಬೆಳ್ಳಿ ಪುತ್ಥಳಿ ಪ್ರತಿಷ್ಠಾಪನೆ ವೇಳೆ ಸಿದ್ಧಲಿಂಗ ಸ್ವಾಮೀಜಿ ನೇತೃತ್ವದಲ್ಲಿ ನಾನಾ ಮಠಾಧೀಶರು ಪೂಜಾ ಕೈಂಕರ್ಯ ಕೈಗೊಂಡರು.   

ತುಮಕೂರು: ಶಿವಕುಮಾರ ಸ್ವಾಮೀಜಿ ಅವರು ಕುಳಿತಿರುವ ಭಂಗಿಯಲ್ಲಿರುವ 3 ಅಡಿ ಎತ್ತರದ 50 ಕೆ.ಜಿ ತೂಕದ ಬೆಳ್ಳಿ ಪುತ್ಥಳಿಯನ್ನು ಸಿದ್ಧಗಂಗಾ ಮಠದಲ್ಲಿರುವ ಸ್ವಾಮೀಜಿ ಅವರ ಗದ್ದುಗೆಯ ಪೀಠದಲ್ಲಿ ಮಂಗಳವಾರ ಪ್ರತಿಷ್ಠಾಪಿಸಲಾಯಿತು.

ನವದೆಹಲಿಯ ಉದ್ಯಮಿ ಹಾಗೂ ಮಠದ ಭಕ್ತ ಮುಖೇಶ್ ಗರ್ಗ್ ಈ ಪುತ್ಥಳಿಯನ್ನು ಮಠಕ್ಕೆ ನೀಡಿದ್ದಾರೆ. ಮುಂಬೈನಲ್ಲಿ ತಯಾರಾಗಿರುವ ಪುತ್ಥಳಿಯನ್ನು ಜ.19ರಂದು ಮಠಕ್ಕೆ ತರಲಾಯಿತು.

ಬೆಳಿಗ್ಗೆ ಹಳೇ ಮಠದಲ್ಲಿ ಪುತ್ಥಳಿಗೆ ಪೂಜೆ ಸಲ್ಲಿಸಲಾಯಿತು. ಸಿದ್ಧಲಿಂಗ ಸ್ವಾಮೀಜಿ ಸೇರಿದಂತೆ ಹಲವು ಮಠಾಧೀಶರು ಮಂತ್ರಘೋಷಗಳ ಮೂಲಕ ಮಂಗಳಾರತಿ ಮಾಡಿದರು. ಬಳಿಕ ಮೆರವಣಿಗೆ ಹೊರಟು ಉದ್ಧಾನ ಶಿವಯೋಗಿಗಳ ಗದ್ದುಗೆಗೆ ತಂದು ಪೂಜೆ ಸಲ್ಲಿಸಲಾಯಿತು. ಅಲ್ಲಿಂದ ಶಿವಕುಮಾರ ಸ್ವಾಮೀಜಿ ಅವರ ಗದ್ದುಗೆಗೆ ತರಲಾಯಿತು.

ADVERTISEMENT

ಪೀಠದ ಕೆಳಭಾಗದಲ್ಲಿ ಶ್ರೀಗಳ ಪಾದುಕೆ, ಸ್ವಲ್ಪ ಮೇಲ್ಭಾಗದಲ್ಲಿ ಶಿವಲಿಂಗವನ್ನು ಈಗಾಗಲೇ ಪ್ರತಿಷ್ಠಾಪಿಸಲಾಗಿದೆ. ಪುತ್ಥಳಿ ಪ್ರತಿಷ್ಠಾಪಿಸಿರುವ ಜಾಗದಲ್ಲಿ ಇಷ್ಟು ದಿನ ಸ್ವಾಮೀಜಿ ಅವರ ಭಾವಚಿತ್ರ ಇಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.