ADVERTISEMENT

‘ಶ್ರೀಗಳ ಪಾರ್ಥಿವ ಶರೀರದ ಮುಂದೆ ಕೂರುವುದು ಗೌರವ ಅಲ್ಲ; ಭಾರತ ರತ್ನ ನೀಡಬೇಕಿತ್ತು’

ಬಿಜೆಪಿಯವರು ‘ಹಡಬಿಟ್ಟಿ’ ದುಡ್ಡು ಇಟ್ಟುಕೊಂಡು ಶಾಸಕರಿಗೆ ಆಮಿಷ ಒಡ್ಡುತ್ತಿದ್ದಾರೆ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 26 ಜನವರಿ 2019, 12:02 IST
Last Updated 26 ಜನವರಿ 2019, 12:02 IST
ತುಮುಕೂರಿನಲ್ಲಿ ಸೊಮವಾರ ಲಿಂಗೈಕ್ಯರಾದ ಶಿವಕುಮಾರಸ್ವಾಮಿಯವರ ಅತಿಮ ದರ್ಶನ ಪಡೆದ ವಿವಿಧ ಮಠಾದೀಶರು, ಬಿಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಸಂಸದ ಜಿ.ಎಂ. ಸಿದ್ದೇಶ್ವರ -ಪ್ರಜಾವಾಣಿ ಚಿತ್ರ-ಕೃಷ್ಣಕುಮಾರ್ ಪಿ.ಎಸ್
ತುಮುಕೂರಿನಲ್ಲಿ ಸೊಮವಾರ ಲಿಂಗೈಕ್ಯರಾದ ಶಿವಕುಮಾರಸ್ವಾಮಿಯವರ ಅತಿಮ ದರ್ಶನ ಪಡೆದ ವಿವಿಧ ಮಠಾದೀಶರು, ಬಿಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಸಂಸದ ಜಿ.ಎಂ. ಸಿದ್ದೇಶ್ವರ -ಪ್ರಜಾವಾಣಿ ಚಿತ್ರ-ಕೃಷ್ಣಕುಮಾರ್ ಪಿ.ಎಸ್    

ಬೆಂಗಳೂರು: ‘ಪ್ರಣವ್ ಮುಖರ್ಜಿ ಅವರಿಗೆ ಭಾರತ ರತ್ನ ಕೊಟ್ಟಿರುವುದು ಸ್ವಾಗತಾರ್ಹ. ಆದರೆ, ಸಿದ್ಧಗಂಗಾ ಶ್ರೀಗಳಿಗೆ ಭಾರತ ರತ್ನ ಕೊಡಬೇಕಿತ್ತು.ಶ್ರೀಗಳ ಪಾರ್ಥಿವ ಶರೀರದ ಮುಂದೆ ದಿನವಿಡೀ ಕೂರುವುದು ಗೌರವ ಅಲ್ಲ. ಅವರ ಸೇವೆಗೆ ಭಾರತ ರತ್ನ ಕೊಟ್ಟಿದ್ದರೆ ಗೌರವ ಆಗಿರುತ್ತಿತ್ತು’ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಗಣರಾಜ್ಯೋತ್ಸವದ ಅಂಗವಾಗಿಕೆಪಿಸಿಸಿ ಕಚೇರಿಯಲ್ಲಿ ಧ್ವಜಾರೋಹಣ ನಡೆಸಿದ ಬಳಿಕ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಸಿದ್ದರಾಮಯ್ಯ,ಸಿದ್ಧಗಂಗಾ ಶ್ರೀಗಳಿಗೆ ಪುರಸ್ಕಾರ ನೀಡುವಂತೆ ನಾವುಅಧಿಕಾರದಲ್ಲಿದ್ದಾಗ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದೆವು. ಶ್ರೀಗಳಿಗೆ ಭಾರತ ರತ್ನ ಕೊಡಬಹುದಿತ್ತು.ಶ್ರೀಗಳ ಸಾಧನೆಗೆ ಭಾರತ ರತ್ನ ಕೊಟ್ಟಿದ್ದರೆ ಅದರ(ಪುರಸ್ಕಾರದ) ಘನತೆಯೇ ಹೆಚ್ಚುತ್ತಿತ್ತು. ಆದರೆ ಕೇಂದ್ರ ಸರ್ಕಾರ ಯಾಕೆ ಕೊಟ್ಟಿಲ್ಲವೋ ಗೊತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT
ಸಿದ್ದರಾಮಯ್ಯ

ಪಾರ್ಥಿವ ಶರೀರದೆದುರು ಕೂರುವ ಬದಲು ಕೇಂದ್ರದ ಮೇಲೆ ಒತ್ತಡ ತರಬೇಕಿತ್ತು ಎನ್ನುವ ಮೂಲಕಪರೋಕ್ಷವಾಗಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಯಡಿಯೂರಪ್ಪ ಅವರಿಗೆ ಟಾಂಗ್‌ ನೀಡಿದರು.

‘ಬಿಜೆಪಿಯವರು ‘ಹಡಬಿಟ್ಟಿ’ ದುಡ್ಡು ಮಾಡಿಕೊಂಡಿದ್ದಾರೆ’

ಆಪರೇಷನ್ ಕಮಲ ಕುರಿತು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಆಪರೇಷನ್‌ ಕಮಲವೂ ಇಲ್ಲ ಏನೂ ಇಲ್ಲ. ಅವರ(ಬಿಜೆಪಿಯ) ಎಲ್ಲ ಪ್ರಯತ್ನಗಳು ವಿಫಲವಾಗಿದೆ.ಬಿಜೆಪಿಯವರು ಹಡಬಿಟ್ಟಿ ದುಡ್ಡು ಮಾಡಿಕೊಂಡಿದ್ದಾರೆ.ಅದನ್ನು ಇಟ್ಟುಕೊಂಡು ನಮ್ಮ ಶಾಸಕರನ್ನ ಬನ್ನಿ ಬನ್ನಿ ಎಂದು ಕರೆಯುತ್ತಿದ್ದಾರೆ. ಸಿಎಂ ಹೇಳಿದ್ದು ನಿಜ. ಈಗಲೂ ನಮ್ಮ ಶಾಸಕರಿಗೆ ಕರೆ ಮಾಡಿ ಆಮಿಷ ಒಡ್ಡುತ್ತಿದ್ದಾರೆ ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.