ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಕುರ್ಚಿಯ ಎಕ್ಸ್‌ಪೈರಿ ದಿನಾಂಕ ಹತ್ತಿರ ಬರುತ್ತಿದ್ದಂತೆ ಕೈ ಕಮಾಂಡ್‌ಗೆ ಕಾಣಿಕೆ ಸಲ್ಲಿಸಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡು ಡಿಸಿಎಂ ಡಿ.ಕೆ ಶಿವಕುಮಾರ್ ಅವರಿಗೆ ಟಕ್ಕರ್ ನೀಡಿದ್ದಾರೆ ಎಂದು ಬಿಜೆಪಿ ವ್ಯಂಗ್ಯವಾಡಿದೆ.
ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ ರಾಜ್ಯ ಘಟಕ, 'ಸಿಎಂ ಆಗಿಯೇ ಸಿದ್ಧ ಎಂದು ತೊಡೆ ತಟ್ಟಿದ್ದ ಡಿಕೆಶಿ ವಿರುದ್ಧ ಸಿದ್ದರಾಮಯ್ಯ ಅವರು ತಮ್ಮ ಆಪ್ತ ಸಚಿವರನ್ನು ಛೂ ಬಿಟ್ಟು, ಜಾತಿಗಣತಿ - ದಲಿತ ಸಿಎಂ ಅಸ್ತ್ರ ಮುಂದಿಟ್ಟುಕೊಂಡು ಡಿಕೆಶಿಯ ನಟ್ಟು, ಬೋಲ್ಟು ಕಳಚಿ ಸಿಎಂ ಪದವಿಯೆಂಬ ಹಗಲು ಕನಸಿಗೆ ತಿಲಾಂಜಲಿ ಹಾಡಿದ್ದಾರೆ' ಎಂದು ಕುಟುಕಿದೆ.
'ತಮ್ಮ ಪಕ್ಷಕ್ಕೆ ಅಪಾರ ಧನ ಅರ್ಪಿಸಿರುವ ಮೂಲ ಕಾಂಗ್ರೆಸ್ಸಿಗ ಡಿಕೆಶಿ ಅವರು ಸಿದ್ದರಾಮಯ್ಯರ ಚಕ್ರವ್ಯೂಹದಲ್ಲಿ ಸೋತಿದ್ದು, ಅವರ ಮುಂದೆ ಬೇರೆ ದಾರಿ ಕಾಣದೆ ಶರಣಾಗಿದ್ದಾರೆ' ಎಂದಿದೆ.
ನಾನು ಸಿಎಂ, ನಾನು ಸಿಎಂ ಎಂದು ಕಿತ್ತಾಡುತ್ತಿರುವ ಕಾಂಗ್ರೆಸ್ ಸರ್ಕಾರದ ಒಳಜಗಳದಿಂದ ರಾಜ್ಯದ ಅಭಿವೃದ್ಧಿ ಕಾರ್ಯಗಳೇ ಮರೀಚಿಕೆಯಾಗಿದೆ ಎಂದೂ ದೂರಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.