ADVERTISEMENT

‘ದಿನ ನೂರು, ಮಾತು ಜೋರು, ಸಾಧನೆ ಶೂನ್ಯ: ಸಿದ್ದರಾಮಯ್ಯ ಲೇವಡಿ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2019, 19:33 IST
Last Updated 5 ನವೆಂಬರ್ 2019, 19:33 IST
   

ಬೆಂಗಳೂರು:ದಿನ ನೂರು, ಮಾತು ಜೋರು, ಸಾಧನೆ ಶೂನ್ಯ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬಿಜೆಪಿ ಸರ್ಕಾರವನ್ನು ಲೇವಡಿ ಮಾಡಿದ್ದಾರೆ.

ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಸರ್ಕಾರಕ್ಕೆ 100 ದಿನಗಳ ತುಂಬಿರುವ ಹಿನ್ನೆಲೆಯಲ್ಲಿ‍ಪ್ರತಿಕ್ರಿಯೆ ನೀಡಿರುವ ಅವರು, ‘ಕ್ರಿಕೆಟ್ ಮೈದಾನದಲ್ಲಿ ಅಂಪೈರ್ ಔಟ್ ಎಂದು ಮತ್ತೆ ಮತ್ತೆ ತೀರ್ಪು ನೀಡಿದರೂ ಒಪ್ಪಿಕೊಳ್ಳದ ಬ್ಯಾಟ್ಸ್ ಮ್ಯಾನ್ ಶತಕ ಪೂರೈಸಿದ ರೀತಿಯಲ್ಲಿ ಯಡಿಯೂರಪ್ಪ 100 ದಿನಗಳ ಆಡಳಿತ ನಡೆಸಿದ್ದಾರೆ’ ಎಂದು ಹೇಳಿದ್ದಾರೆ.

ನೆರೆ ಹಾವಳಿಯಿಂದ ಜನ ತತ್ತರಿಸುತ್ತಿರುವಾಗ ರಾಜ್ಯದಲ್ಲಿ ಸರ್ಕಾರವೇ ಇಲ್ಲದಂತಹ ಅನಾಥ ಸ್ಥಿತಿ ನೆಲೆಸಿತ್ತು. ಜನತೆ ನೆರೆ ನೀರಲ್ಲಿ ಮುಳುಗುತ್ತಿದ್ದರೆ ಮುಖ್ಯಮಂತ್ರಿಯವರು ಆಪರೇಷನ್ ಕಮಲದಲ್ಲಿ ಮುಳುಗಿದ್ದರು. ಸಚಿವರಂತೂ ಇರಲೇ ಇಲ್ಲ, ಬಿಜೆಪಿಯ ಶಾಸಕರು ಮತ್ತು ಸಂಸದರೂ ಕೂಡಾ ನೆರೆ ಸಂತ್ರಸ್ತರ ಕಡೆ ತಲೆ ಹಾಕಲಿಲ್ಲ ಎಂದು ದೂರಿದ್ದಾರೆ.

ADVERTISEMENT

ನೆರೆ ಪರಿಹಾರದ ಬಗ್ಗೆ ಕೇಂದ್ರ ಸರ್ಕಾರದ ನಿರ್ಲಕ್ಷ್ಯದ ಬಗ್ಗೆ ರಾಜ್ಯದ ಜನತೆ ಬಂಡೇಳುತ್ತಿರುವ ಸೂಚನೆ ಗೊತ್ತಾಗುತ್ತಿದ್ದಂತೆಯೇ ಪ್ರಧಾನಿಯವರು ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎನ್ನುವಂತೆ ₹1,200 ಕೋಟಿ ಪರಿಹಾರ ನೀಡಿ ಕೈತೊಳೆದುಕೊಂಡು ಬಿಟ್ಟರು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.