ಸಿಎಂ ಸಿದ್ದರಾಮಯ್ಯ ಅವರು ರಾಘವೇಂದ್ರ ಸ್ವಾಮಿಯ ಭಾವಚಿತ್ರವನ್ನು ತಿರಸ್ಕರಿಸಿದ್ದಕ್ಕೆ, ನಟ ಜಗ್ಗೇಶ್ ಸಾಮಾಜಿಕ ಮಾಧ್ಯಮದಲ್ಲಿ ಅಸಮಾಧಾನ ಹೊರ ಹಾಕಿದ್ದಾರೆ.
ಸಿದ್ದರಾಮಯ್ಯನವರು ಕಾರಿನಲ್ಲಿ ಕುಳಿತಿರುವಾಗ ಒಂದಿಷ್ಟು ಜನ ಅವರ ಕಾರು ಬಳಿ ಬಂದು ರಾಯರ ಭಾವಚಿತ್ರ ಕೊಡಲು ಮುಂದಾಗುತ್ತಾರೆ. ಆ ವೇಳೆ ಸಿದ್ದರಾಮಯ್ಯ ಅವರು ಭಾವಚಿತ್ರ ಬೇಡ ಎಂದು ವಾಪಸ್ಸು ಕೊಟ್ಟಿದ್ದಾರೆ. ಸದ್ಯ, ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿಡುತ್ತಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ರಾಜ್ಯಸಭೆ ಸದಸ್ಯ, ನಟ ಜಗ್ಗೇಶ್ ಅವರು, ‘ರಾಯರನ್ನ ಅಪಮಾನ ಮಾಡಿದವರು ಯಾರೂ ಉದ್ದಾರ ಆದ ಇತಿಹಾಸವಿಲ್ಲ. ರಾಯರ ಸಣ್ಣ ಕೃಪೆ ನಮ್ಮ ಮೇಲೆ ಬೀಳಲಿ ಎಂದು ಕೋಟ್ಯಂತರ ಭಕ್ತವೃಂದ ಪತಪ ವೈರಾಗ್ಯ ಉಪವಾಸದಿಂದ ಇದ್ದು ಸೇವೆ ಸಲ್ಲಿಸುತ್ತಾರೆ. ಭಕ್ತಿಯಿಂದ ಬಂದದ್ದನ್ನು ತಿರಸ್ಕರಿಸಿದ ಪ್ರಥಮ ವ್ಯಕ್ತಿಯನ್ನು ನನ್ನ ಬದುಕಲ್ಲಿ ನಾನು ಕಂಡಿದ್ದು. ರಾಯರಿದ್ದಾರೆ.. ಎದ್ದುಬರುತ್ತಾರೆ.. ಕಾಯಬೇಕು’ ಎಂದು ಬರೆದುಕೊಂಡು ಅಸಮಾಧಾನ ಹೊರ ಹಾಕಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.