ADVERTISEMENT

ಅಮೆರಿಕದಲ್ಲಿ ಸಿಂಧನೂರು ಯುವಕ ಸಾವು

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2019, 6:44 IST
Last Updated 5 ಸೆಪ್ಟೆಂಬರ್ 2019, 6:44 IST
ಅಜೇಯಕುಮಾರ್‌
ಅಜೇಯಕುಮಾರ್‌   

ರಾಯಚೂರು: ಅಮೆರಿಕದ ಟೆಕ್ಸಾಸ್‌ ಯುನಿರ್ವಸಿಟಿ ಆಫ್‌ ಎಂಜಿನಿಯರಿಂಗ್‌ನಲ್ಲಿ ಎಂ.ಟೆಕ್‌ ಓದುತ್ತಿದ್ದ ಜಿಲ್ಲೆಯ ಸಿಂಧನೂರು ನಗರದ ಶ್ರೀಪುರಂ ಜಂಕ್ಷನ್‌ ನಿವಾಸಿಅಜೇಯ ಕುಮಾರ್‌ ಮೋಡಿ (23) ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಮಂಗಳವಾರ ಸಂಜೆ ನಡೆದಿದೆ.

ಅವರು ಟೆಕ್ಸಾಸ್‌ ಬಳಿಯ ಟರ್ನರ್‌ ವಾಟರ್‌ ಫಾಲ್ಸ್‌ನಲ್ಲಿ ಮುಳುಗುತ್ತಿದ್ದ ಗೆಳೆಯಕೌಶಿಕ್‌ನನ್ನುಬದುಕಿಸುವುದಕ್ಕೆ ಹೋದಾಗ ನೀರಿನಲ್ಲಿ ಮುಳುಗಿದ್ದಾರೆ.

ಆಂಧ್ರ ಪ್ರದೇಶದ ನಲ್ಲೂರಿನಕೌಶಿಕ್ ಜತೆಗೆಓಕ್ಲಹ್ಯಾಮ್‌ನ ಟರ್ನರ್‌ ವಾಟರ್‌ ಫಾಲ್ಸ್‌ಗೆ ಹೋಗಿದ್ದರು. ನೀರಿಗಿಳಿದ ಕೌಶಿಕ್‌ ಮುಳುಗುತ್ತಿರುವುದನ್ನು ಕಂಡು ರಕ್ಷಿಸಲು ಪ್ರಯತ್ನಿಸಿದ್ದಾರೆ. ಕೈಹಿಡಿದು ಮೇಲೆ ತರುವ ಪ್ರಯತ್ನದಲ್ಲಿ ಅಜೇಯ ಕುಮಾರ್‌ ಸಹ ನೀರಿನ ಸೆಳೆತಕ್ಕೆ ಸಿಕ್ಕಿದ್ದಾರೆ.ಒಂದು ಗಂಟೆಗಳ ಕಾಲಶೋಧ ನಡೆಸಿದ ಬಳಿಕಮೃತದೇಹಗಳನ್ನುಹೊರತೆಗೆಯಲಾಗಿದೆ.

ADVERTISEMENT

ಅಜೇಯ ಕುಮಾರ್‌ ತಂದೆ ಶ್ರೀನಿವಾಸ್ ರೈತರು. ಪುತ್ರನ ಸಾವಿನಿಂದ ಕುಟುಂಬದ ಸದಸ್ಯರೆಲ್ಲರೂ ಶೋಕದಲ್ಲಿ ಮುಳುಗಿದ್ದಾರೆ. ಮೃತದೇಹವು ಸಿಂಧನೂರಿಗೆ ಶುಕ್ರವಾರಸಂಜೆ ಬರಬಹುದು ಎಂದು ಕುಟುಂಬದ ಸಂಬಂಧಿಗಳು ತಿಳಿಸಿದ್ದಾರೆ.

ಸಿಂಧನೂರಿನಲ್ಲಿ ಪ್ರೌಢಶಾಲೆ, ಬಳ್ಳಾರಿಯಲ್ಲಿ ಪಿಯು ಶಿಕ್ಷಣಹಾಗೂ ಬೆಂಗಳೂರಿನಲ್ಲಿ ಎಂಜಿನಿಯರಿಂಗ್‌ ಪೂರ್ಣಗೊಳಿಸಿದ ಬಳಿಕ ಉನ್ನತ ಶಿಕ್ಷಣಕ್ಕಾಗಿ ಅಜೇಯ ಅವರು ಅಮೆರಿಕಕ್ಕೆ ತೆರಳಿ ಒಂದು ವರ್ಷವಾಗಿತ್ತು.

ಮಾರ್ಚ್ 28ಕ್ಕೆ ಸಿಂಧನೂರು ಮೂಲದವೈದ್ಯರೊಬ್ಬರ ಮೃತದೇಹ ಅಮೆರಿಕಾದ ನ್ಯೂಜೆರ್ಸಿಯಲ್ಲಿರುವ ಆಸ್ಪತ್ರೆಯ ಆವರಣದಲ್ಲಿ ಪತ್ತೆಯಾಗಿತ್ತು. ಅನುಮಾನಾಸ್ಪದ ರೀತಿ ಸಾವಿಗೀಡಾಗಿದ್ದ ವ್ಯಕ್ತಿಸಿಂಧನೂರಿನಗಾಂಧಿನಗರದ ನಿವಾಸಿನಂದಿಗಂಮಂದೀಪ್‌(28) ಎಂದು ಗುರುತಿಸಲಾಗಿತ್ತು. ಅವರುಅಮೆರಿಕದ ಸೇಂಟ್‌ಪೀಟರ್ಸ್‌ವಿಶ್ವವಿದ್ಯಾಲಯದಲ್ಲಿ ಅಂತಿಮ ವರ್ಷದ ಸ್ನಾತಕೋತ್ತರ ಪದವಿಗೆ ವ್ಯಾಸಂಗ ಮಾಡುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.